ಉಡುಪಿ/ಮಂಗಳೂರು: ಮೊಬೈಲ್ ಫೋನ್, ಪೆನ್ ಕೆಮರಾ, ವಿವಿಧ ಬಗೆಯ ಆಯುಧ, ನೀರಿನ ಬಾಟಲ್, ಆಹಾರ ಸಾಮಗ್ರಿಗಳು ಹಾಗೂ ಸ್ಫೋಟಕ ವಸ್ತುಗಳನ್ನು ಮತಗಟ್ಟೆ ಕೇಂದ್ರಕ್ಕೆ ಕೊಂಡೊಯ್ಯಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿಗಳಾದ ಕೂರ್ಮಾರಾವ್ ಎಂ. ಮತ್ತು ರವಿ ಕುಮಾರ್ ಅವರು ತಿಳಿಸಿದ್ದಾರೆ.
ಚುನಾವಣೆ ಯಶಸ್ವಿಯಾಗಿ ನಡೆಸಲು ಮತಗಟ್ಟೆ ಅಧಿಕಾರಿಗಳನ್ನು ಹಾಗೂ ವೀಕ್ಷಕರು, ಭದ್ರತಾ ಸಿಬಂದಿ ನೇಮಿಸಲಾಗಿದೆ. ಪ್ರಿಸೈಡಿಂಗ್ ಆಫಿಸರ್, ಅಸಿಸ್ಟೆಂಟ್ ಪ್ರಿಸೈಡಿಂಗ್ ಆಫೀಸರ್, ಮತಗಟ್ಟೆ ಅಧಿಕಾರಿ ಗಳು ಹಾಗೂ ಡಿ ದರ್ಜೆ ನೌಕರ ರನ್ನು ನೇಮಿಸಲಾಗಿದೆ.
ವಿಶೇಷ ಚೇತನ ಮತದಾರರಿಗಾಗಿ ಗಾಲಿ ಕುರ್ಚಿ, ಭೂತ ಕನ್ನಡಿ ಬ್ರೈಲ್ ಲಿಪಿಯ ಮಾದರಿ ಮತಪತ್ರ, ಆದ್ಯತೆ ಮೇಲೆ ಪ್ರವೇಶ, ರ್‍ಯಾಂಪ್, ಕೋರಿಕೆ ಮೇರೆಗೆ ವಾಹನ ವ್ಯವಸ್ಥೆ ಸಿದ್ಧತೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಉಡುಪಿ: ಮತಗಟ್ಟೆಯೊಳಗೆ ಮೊಬೈಲ್, ಪೆನ್ ಕ್ಯಾಮರಾ ನಿಷೇಧ
