Monday, July 15, 2024
Homeಸುದ್ದಿಕಾಂತಾರ ಮೂಗುತಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್; ಚಿನ್ನ, ಬೆಳ್ಳಿ ಎದುರು ಈ ಮೂಗುತಿಯದ್ದೇ ಸೌಂಡ್

ಕಾಂತಾರ ಮೂಗುತಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್; ಚಿನ್ನ, ಬೆಳ್ಳಿ ಎದುರು ಈ ಮೂಗುತಿಯದ್ದೇ ಸೌಂಡ್

ಕಾಂತಾರ ಸಿನಿಮಾ ರಿಲೀಸ್ ಆದಾಗಿನಿಂದ ಕನ್ನಡ ಇಂಡಸ್ಟ್ರಿ ಗತ್ತು ಒಂದು ಲೆವೆಲ್ ಬದಲಾಗಿ ಹೋಗಿದೆ. ಇಡೀ ಭಾರತೀಯ ಸಿನಿಮಾ ಇಂಡಸ್ಟ್ರಿ ತಿರುಗಿ ನೋಡೋ ಹಾಗೇ ಸಿನಿಮಾ ಮಾಡಿದ ಕೀರ್ತಿ ಕಾಂತಾರ ಚಿತ್ರ ತಂಡದ್ದು. ಅಂದಹಾಗೆಯೇ ಈ ಸಿನಿಮಾ ರಿಲೀಸ್​ ಆಗಿ 7 ತಿಂಗಳು ಕಳೆದ್ರು ಚಿತ್ರದ ಒಂದಲ್ಲಾ ಒಂದು ಸುದ್ದಿ ವೈರಲ್​ ಆಗುತ್ತಿರುತ್ತದೆ. ಆದರೀಗ ಲೀಲಾ ತೊಟ್ಟಿರುವ ಮೂಗುತಿಯದ್ದೇ ಸುದ್ದಿ ಹರಿದಾಡುತ್ತಿದೆ. ಈ ಮೂಗುತಿಗೆ ಮಾರುಕಟ್ಟೆಯಲ್ಲಿ ಭಾರಿ ಡಿಮ್ಯಾಂಡ್​​ ಬಂದಿದೆಯಂತೆ!. ಈ ಕುರಿತಾದ ಇಂಟ್ರಸ್ಟಿಂಗ್​ ಸ್ಟೋರಿ ಇಲ್ಲಿದೆ.

ಸಿನಿಮಾ ಅಂದ್ರೆ ಹಾಗೆಯೇ.. ಅಲ್ಲಿರುವ ಒಂದೊಂದು ಚಿತ್ರಣವು ನೋಡುಗರ ಮನಹೊಕ್ಕುತ್ತದೆ. ಅವರಲ್ಲಿ ಬದಲಾವಣೆಯನ್ನು ತರುವ ಶಕ್ತಿ ಸಿನಿಮಾಕ್ಕಿದೆ. ಅದರೀಗ ನಟಿ ಸಪ್ತಮಿ ಗೌಡ ಕಾಂತಾರದಲ್ಲಿ ತೊಟ್ಟಿರುವ ಮೂಗುತಿ ಬಹುತೇಕ ಮಹಿಳೆಯರ ಮನಕದ್ದಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಡಿಮ್ಯಾಂಡ್​​ ಸೃಷ್ಟಿಯಾಗಿದೆ.

ಕಾಂತಾರದಲ್ಲಿ ಎರಡು ಕಡೆ ಮೂಗುತಿ ಹಾಕಿ ಸಪ್ತಮಿಗೌಡ ಫುಲ್ ಫೇಮಸ್ ಆಗಿದ್ದೇ ಆಗಿದ್ದು, ಈಗ ಮಾರುಕಟ್ಟೆಗೆ ಧಾವಿಸುತ್ತಿರುವ ಮಹಿಳೆಯರು ಕಾಂತಾರ ಮೂಗುತಿ ಇದೆಯಾ ಅಂತ ಕೇಳುತ್ತಿದ್ದಾರೆ. ಈ ನಡುವೆ ಒಂದೆಡೆ ಚಿನ್ನಡ ಬೆಲೆ ಗಗನಕ್ಕೇರಿದೆ, ವಜ್ರದ ರೇಟ್​ ಕೇಳಿ ಮಾರುದ್ದ ಓಡೋದೇ ಜಾಸ್ತಿ. ಹೀಗಿರುವಾಗ ಮಾರುಕಟ್ಟೆಯಲ್ಲಿ ಕಾಂತಾರ ಮೂಗುತಿಯದ್ದೆ ಕಾರುಬಾರು ನಡೆಯುತ್ತಿದೆ. ಮಹಿಳೆಯರು ಹಳೆಯ ಸಂಪ್ರದಾಯಕ್ಕೆ ಫಿದಾ ಆಗಿರೋದು ಸದ್ಯ ಸಂತಸದ ವಿಚಾರವಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News