Monday, July 15, 2024
Homeಸುದ್ದಿಕರಾವಳಿಕಾರ್ಕಳದಲ್ಲಿಂದು ಯೋಗಿ ರೋಡ್‌ ಶೋ : ಬಿಗಿ ಪೊಲೀಸ್ ಬಂದೋಬಸ್ತ್..!!

ಕಾರ್ಕಳದಲ್ಲಿಂದು ಯೋಗಿ ರೋಡ್‌ ಶೋ : ಬಿಗಿ ಪೊಲೀಸ್ ಬಂದೋಬಸ್ತ್..!!

ಕಾರ್ಕಳ: ನಾಥಪಂಥದ ಕ್ಷಾತ್ರ ತೇಜಸ್ಸಿನ ಯೋಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮೇ 6ರಂದು ಕಾರ್ಕಳಕ್ಕೆ ಆಗಮಿಸಿ ಬಿಜೆಪಿ ಅಭ್ಯರ್ಥಿ ವಿ.ಸುನಿಲ್‌ಕುಮಾರ್‌ ಅವರ ಪರ ರೋಡ್‌ ಶೋ ನಡೆಸಲಿದ್ದಾರೆ.


ಬಿಗು ಪೊಲೀಸ್‌ ಬಂದೊಬಸ್ತ್
ಯೋಗಿ ಆದಿತ್ಯನಾಥ್‌ ಆಗಮನ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸರು ಬಿಗು ಭದ್ರತೆ ಕೈಗೊಂಡಿದ್ದಾರೆ. ರೋಡ್‌ ಶೋ ವೇಳೆ ಭದ್ರತೆ ಹಿನ್ನೆಲೆಯಲ್ಲಿ ನಗರದಲ್ಲಿ ಅಂಗಡಿ ಮುಂಗಟ್ಟು
ಗಳನ್ನು ಮುಚ್ಚುವಂತೆ ಪೊಲೀಸರು ಈಗಾಗಲೇ ಸೂಚನೆ ನೀಡಿದ್ದಾರೆ. ರೋಡ್‌ ಶೋ ವೇಳೆ ಪೇಟೆಯೊಳಗೆ ವಾಹನ ಸಂಚಾರಕ್ಕೆ ಅವಕಾಶವಿಲ್ಲದ ಕಾರಣ ವಾಹನ ಸಂಚಾರದ ಮಾರ್ಗಗಳಲ್ಲಿ ವ್ಯತ್ಯಯವಾಗಲಿದೆ.

ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಕಟ್ಟೆಚ್ಚರ
ಯೋಗಿ ಆದಿತ್ಯನಾಥ ಆಗಮನದ ಹಿಂದಿನ ದಿನ ಪೊಲೀಸರು, ಯೋಧರ ವಿವಿಧ ಬೆಟಾಲಿಯನ್‌ ನಗರದಲ್ಲಿ ಪೆರೆಡ್‌ ನಡೆಸಿದರು. ಯೋಗಿ ಆದಿತ್ಯನಾಥ್‌ ಆಗಮನ ಹಿನ್ನೆಲೆಯಲ್ಲಿ ನಕ್ಸಲ್‌ ಪೀಡಿತ ಭಾಗಗಳಾದ ಹೆಬ್ರಿ, ಈದು, ಮಾಳ ಸೇರಿದಂತೆ ಪಶ್ಚಿಮ ಘಟ್ಟ ತಪ್ಪಲು ಪ್ರದೇಶ ಹಾಗೂ ತಾಲೂಕಿನಾದ್ಯಂದ ಕಟ್ಟೆಚ್ಚರ ವಹಿಸಲಾಗಿದೆ. ಪೊಲೀಸರು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಎಲ್ಲೆಡೆ ಹದ್ದಿನ ಕಣ್ಣಿರಿಸಲಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News