ಮನೆಯಿಂದಲೇ ಮತದಾನಕ್ಕೆ ಇಂದು ಕೊನೆ ದಿನ

ಬೆಂಗಳೂರು, ಮೇ 06: ಭಾರತ ಚುನಾವಣೆ ಆಯೋಗದ ನಿರ್ದೇಶನದಂತೆ ಕರ್ನಾಟಕ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದ್ದು ಮನೆಯಿಂದಲೇ ಮತದಾನ’ ಪ್ರಕ್ರಿಯೆಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನ ವ್ಯಕ್ತವಾಗಿದ್ದು, ಮನೆಯಿಂದಲೇ ಮತದಾನ ಮಾಡುವುದಕ್ಕೆ ಇಂದು ಕೊನೆಯ ದಿನವಾಗಿದೆ.

ಇದುವರೆಗೆ ರಾಜ್ಯದಲ್ಲಿ ಒಟ್ಟು 91,386 ಮಂದಿ ಮನೆಯಿಂದಲೇ ಮತದಾನ ಮಾಡಿದ್ದಾರೆ. ದೇಶದಲ್ಲಿ ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟವರು ಮತ್ತು ವಿಕಲಚೇತನರಿಗೆ ಮನೆಯಿಂದ ಮತದಾನದ ಅವಕಾಶ ಆಯೋಗ ಕಲ್ಪಿಸಿತ್ತು.

ಒಟ್ಟು 99529ಮಂದಿ ಈ ಸೌಲಭ್ಯಕ್ಕೆ ಹೆಸರು ನೋಂದಾಯಿಸಿಕೊಂಡಿದ್ದರು. 80ವರ್ಷ ಮೇಲ್ಪಟ್ಟ 80,250 ಮಂದಿಯಲ್ಲಿ ಶೇ.73.743ರಷ್ಟು, 19279 ವಿಕಲಚೇತನರ ಪೈಕಿ 17,943ಮಂದಿ ಮತ ಚಲಾಯಿಸಿದ್ದಾರೆ ಎಂದು ಆಯೋಗ ತಿಳಿಸಿದೆ.

You cannot copy content from Baravanige News

Scroll to Top