ಫೋಕ್ಸೋ ಪ್ರಕರಣದ ಸಾಕ್ಷಿ ಹೇಳಲು ಬಂದಿದ್ದ ವ್ಯಕ್ತಿಗೆ ತಂಡದಿಂದ ಹಲ್ಲೆ

ಉಡುಪಿ ಮೇ.05: ಫೋಕ್ಸೋ ಪ್ರಕರಣದ ಸಾಕ್ಷಿ ಹೇಳಲು ಬಂದಿದ್ದ ವ್ಯಕ್ತಿಗೆ ತಂಡವೊಂದು ಹಲ್ಲೆ ನಡೆಸಿ ಮರಕ್ಕೆ ಕಟ್ಟಿ ಹಾಕಿ ಹಿಂಸೆ ನೀಡಿರುವ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಬಗ್ಗೆ ಹಲ್ಲೆಗೆ ಒಳಗಾದ ಕಾರ್ಕಳದ ನಿಟ್ಟೆಯ ಅಬ್ದುಲ್ ಜಬ್ಬರ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಇವರು ಮೇ.3 ರಂದು ಉಡುಪಿ ಪೋಕ್ಸ್‌ ನ್ಯಾಯಾಲಯದ ಸ್ಪೇಶಲ್ ಕೇಸ್‌ಗೆ ಸಾಕ್ಷಿ ನುಡಿಯಲು ಬಂದಿದ್ದರು. ಸಾಕ್ಷಿ ನುಡಿದು ಸಂಬಂಧಿಕರ ಮನೆಗೆ ಆಟೋದಲ್ಲಿ ಹೋಗುತ್ತಿರುವಾಗ ಸಂಜೆ ವೇಳೆ ಉಡುಪಿಯ ಗುಂಡಿಬೈಲುವಿನ ಬಾರ್‌ವೊಂದರ ಸಮೀಪ ಆಪಾದಿತರಾದ ಫಾರೂಕ್, ಶಾರೂಕ್, ಅನಿಲ್, ಇಟ್ಬಾಲ್ ಸಾರ್ ಹಾಗೂ ಇತರರು ಅಡ್ಡಗಟ್ಟಿ ರಿಕ್ಷಾದ ಒಳಗೆ ಕುಳಿತುಕೊಂಡಲ್ಲೇ ಅಬ್ದುಲ್ ಜಬ್ಬಾರ್ ರವರ ಮೇಲೆ ಹಲ್ಲೆ ಮಾಡಿದ್ದರು ಮಾತ್ರವಲ್ಲದೆ ಆಟೋ ರಿಕ್ಷಾದಿಂದ ಹೊರಗೆ ಎಳೆದು ಆರೋಪಿಗಳು ಬಂದಿದ್ದ ಕಾರಿನೊಳಗೆ ಬಲಾತ್ಕಾರವಾಗಿ ದೂಡಿ ಕಾರಿನೊಳಗೆ ಕೂರಿಸಿಕೊಂಡು ಯಾವುದೋ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ ಮರಕ್ಕೆ ಕಟ್ಟಿ ಹಾಕಿ ಮತ್ತೆ ಹಲ್ಲೆ ಮಾಡಿ ಹಿಂಸೆ ನೀಡಿದ್ದಾರೆ. ನಂತರ ಮೇ.4 ರಂದು ಬೆಳಿಗ್ಗೆ ಬಂಟಕಲ್ ಬಿ.ಸಿ ರೋಡ್ ಪಂಜಿಮಾರು ಬಳಿ ಕರೆದುಕೊಂಡು ಬಂದು ಪೊದೆಯೊಳಗೆ ದೂಡಿ ಹಾಕಿ ಹೋಗಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You cannot copy content from Baravanige News

Scroll to Top