ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಸ್ಫೋಟ; ಇಬ್ಬರು ಯೋಧರು ಹುತಾತ್ಮ

ಶ್ರೀನಗರ, ಮೇ 05: ಭಯೋತ್ಪಾದಕರು ನಡೆಸಿದ ಸ್ಫೋಟದಲ್ಲಿ ಇಬ್ಬರು ಸೇನಾ ಸಿಬ್ಬಂದಿ ಸಾವನ್ನಪ್ಪಿ, ಮೇಜರ್ ಶ್ರೇಣಿಯ ಅಧಿಕಾರಿ ಸೇರಿದಂತೆ ನಾಲ್ವರು ಗಾಯಗೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ನಡೆದಿದೆ.

ಭಯೋತ್ಪಾದಕರು ಸೇನೆಯ ಮೇಲೆ ದಾಳಿ ನಡೆಸಿ ಇತ್ತೀಚೆಗೆ ಐವರು ಯೋಧರು ಹುತಾತ್ಮರಾದ ಘಟನೆಗೆ ಕಾರಣರಾದ ಉಗ್ರರನ್ನು ಹೊಡೆದುರುಳಿಸಲು ಸೇನೆ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

ಇನ್ನು ಕಾರ್ಯಾಚರಣೆಯ ಸಮಯದಲ್ಲಿ, ಪ್ರತೀಕಾರವಾಗಿ ಸ್ಫೋಟಕ ಸಾಧನವನ್ನು ಎಸೆದಿದ್ದು, ಈ ವೇಳೆ ಸೇನಾ ತಂಡದಲ್ಲಿದ್ದ ಇಬ್ಬರು ಸಾವಿಗೀಡಾಗಿದ್ದಾರೆ.

Scroll to Top