Monday, July 15, 2024
Homeಸುದ್ದಿಉಡುಪಿ: 'ಬಡವರ ಭವಿಷ್ಯವನ್ನು ನಿರ್ಧರಿಸುವ ಚುನಾವಣೆ ಇದಾಗಿದೆ'; ವಿನಯ್ ಕುಮಾರ್ ಸೊರಕೆ

ಉಡುಪಿ: ‘ಬಡವರ ಭವಿಷ್ಯವನ್ನು ನಿರ್ಧರಿಸುವ ಚುನಾವಣೆ ಇದಾಗಿದೆ’; ವಿನಯ್ ಕುಮಾರ್ ಸೊರಕೆ

ಉಡುಪಿ, ಮೇ 05: ಬಡವರ ಭವಿಷ್ಯವನ್ನು ನಿರ್ಧರಿಸುವ ಚುನಾವಣೆ ಇದಾಗಿದೆ ಬಡವರು ಮತ್ತು ಮಧ್ಯಮ ವರ್ಗ ದವರು ಈ ಚುನಾವಣೆಯಲ್ಲು ಸೋಲಬಾರದು ಅನ್ನೋದು ನನ್ನ ಆಸೆ. ನಿಮ್ಮ ಮತವನ್ನು ಮಾರಿಕೊಳ್ಳಬೇಡಿ ಅಂತಾ ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ‌ವಿನಯ್‌ಕುಮಾರ್ ಸೊರಕೆ ಹೇಳಿದ್ದಾರೆ.

ಕಾಪು ಕ್ಷೇತ್ರದ ಕಟಪಾಡಿ ಸರಕಾರಿ ಗುಡ್ಡೆಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಬಡವರ ಜನಸಾಮಾನ್ಯರ ಎಲ್ಲಾ ಯೋಜನೆಗಳನ್ನು ಪೂರ್ತಿಯಾಗಿ ಹಿಂತೆಗೆದುಕೊಳ್ಳಲಾಗಿದೆ. ಈ ಮೂಲಕ ಬಡವರು‌ ಜನಸಾಮಾನ್ಯರನ್ನು ಕಷ್ಟಕ್ಕೆ ದೂಡುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿರೋದು ದೊಡ್ಡ ದುರಂತ ಅಂತಾ ಅವರು ವಿಷಾದ ವ್ಯಕ್ತಪಡಿಸಿದರು.

ದ್ವೇಶ, ಅಸೂಯೆ, ಬೇಡ ಶಾಂತ ರೀತಿಯಲ್ಲಿ ಎಲ್ಲಾ ಸಮಾಜದವರನ್ನು ಒಟ್ಟುಗೂಡಿಸಿಕೊಂಡು ಕೆಲಸ ಮಾಡಬೇಕು. ಹಣದ ಮೂಲಕ, ಗಿಫ್ಟ್ ಮುಖಾಂತರ ಆಮಿಷ ಒಡ್ಡಿ‌ ನಿಮ್ಮ ಮತ ಸೆಳೆಯಲು ಬರ್ತಾರೆ. ನಿಮ್ಮನ್ನ ಮತವನ್ನು ಖರೀದಿ ಮಾಡಲು ಬರ್ತಾರೆ. ನೀವು ಜಾಗ್ರತೆ ವಹಿಸಿ ನಿಮ್ಮ ಮತವನ್ನು ಮಾರಿಕೊಳ್ಳದೆ ನಿಮ್ಮ ಕಷ್ಟದಲ್ಲಿ ಭಾಗಿಯಾಗಿ ಸಮಸ್ಯೆ ಗೆ ಪರಿಹಾರ ಒದಗಿಸುವ ಪ್ರಾಮಾಣಿಕ ರಿಗೆ ಓಟು ನೀಡಿ ಗೆಲ್ಲಿಸಿ ಅಂತಾ ವಿನಂತಿಸಿಕೊಂಡ್ರು.

ಕಾಂಗ್ರೆಸ್ ಮುಖಂಡರಾದ ಸರಸ್ವತಿ ಬಂಗೇರ, ಶ್ರೀಕರ ಅಂಚನ್, ಪ್ರಭಾಕರ ಆಚಾರ್, ಆಶಾ ಅಂಚನ್, ಅಬೂಬಕ್ಕರ್ ಎ.‌ಆರ್, ವಿನಯ ಬಲ್ಲಾಳ್ ಉಪಸ್ಥಿತರಿದ್ದರು.

ವಿನಯ ಕುಮಾರ್ ಸೊರಕೆಯವರ ವ್ಯಕ್ತಿತ್ವಕ್ಕೆ ಯುವ ಸಮುದಾಯ ಮನಸೋಲುತ್ತಿದೆ. ಕಟಪಾಡಿ ಸರಕಾರಿ ಗುಡ್ಡೆ ಕಾರ್ಯಕ್ರಮದಲ್ಲಿ ರಮ್ಜಿನ್ ಎಂಬಾಕೆ ಸೊರಕೆಯವರ ಜಾತ್ಯಾತೀತ ಆಡಳಿತ ಮತ್ತು ಪ್ರಾಮಾಣಿಕತೆ ಗೆ ಮನಸೋತು ಸೊರಕೆಯವರಿಗೆ ಭಾವಚಿತ್ರದ ಆರ್ಟ್ ಗಿಫ್ಟ್ ನೀಡಿದ ಘಟನೆ ನಡೆದಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News