ಮಹಾತ್ಮ ಗಾಂಧಿಯವರ ಮೊಮ್ಮಗ ಅರುಣ್ ಗಾಂಧಿ ನಿಧನ..!!

ಮಹಾರಾಷ್ಟ್ರ: ಮಹಾತ್ಮ ಗಾಂಧಿಜೀಯವರ ಮೊಮ್ಮಗ ಅರುಣ್ ಗಾಂಧಿ(89) ಅವರು ಇಂದು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಿಧನರಾಗಿದ್ದಾರೆ.


ಸಾಮಾಜಿಕ ಕಾರ್ಯಕರ್ತರಾಗಿದ್ದ ಅರುಣ್ ಗಾಂಧಿ ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇದೀಗ ನಿಧನರಾಗಿದ್ದು, ಅವರ ಅಂತ್ಯಕ್ರಿಯೆ ಕೊಲ್ಹಾಪುರದಲ್ಲಿ ನೆರವೇರಲಿದೆ ಎಂದು ಪುತ್ರ ತುಷಾರ್ ಗಾಂಧಿ ತಿಳಿಸಿದ್ದಾರೆ.

ಏಪ್ರಿಲ್ 14, 1934 ರಂದು ಡರ್ಬನ್‌ನಲ್ಲಿ ಮಣಿಲಾಲ್ ಗಾಂಧಿ ಮತ್ತು ಸುಶೀಲಾ ಮಶ್ರುವಾಲಾ ದಂಪತಿಗೆ ಜನಿಸಿದ ಅರುಣ್ ಗಾಂಧಿ, ಸಾಮಾಜಿಕ ಕಾರ್ಯಕರ್ತರಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಇನ್ನು ಅರುಣ್ ಗಾಂಧಿ ಕೂಡ ಕೆಲವು ಪುಸ್ತಕಗಳನ್ನು ಬರೆದಿದ್ದು, ಅವುಗಳಲ್ಲಿ ದಿ ಗಿಫ್ಟ್ ಆಫ್ ಆ್ಯಂಗರ್ ಆಂಡ್ ಅದರ್ ಲೆಸ್ಸನ್ಸ್ ಫ್ರಂ ಮೈ ಗ್ರ್ಯಾಂಡ್ಫಾದರ್ ಹಮಾತ್ಮ ಗಾಂಧಿ ಪ್ರಮುಖವಾದವು.

You cannot copy content from Baravanige News

Scroll to Top