Friday, April 19, 2024
Homeಸುದ್ದಿಕರಾವಳಿಚುನಾವಣೆ ಕರ್ತವ್ಯ: ಸಿಬ್ಬಂದಿಗೆ ಬಸ್ ವ್ಯವಸ್ಥೆ

ಚುನಾವಣೆ ಕರ್ತವ್ಯ: ಸಿಬ್ಬಂದಿಗೆ ಬಸ್ ವ್ಯವಸ್ಥೆ

ಉಡುಪಿ: ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣೆ ಕರ್ತವ್ಯಕ್ಕಾಗಿ ನೇಮಕ ಮಾಡಿರುವ ಪಿಆರ್‌ಓ, ಎಪಿಆರ್‌ಓ, ಪಿಓಗಳಿಗೆ ಮೇ 2ರಂದು ನಡೆಯುವ ಕಾರ್ಯಾಗಾರಕ್ಕೆ ತೆರಳಲು ಜಿಲ್ಲಾಡಳಿತದ ವತಿಯಿಂದ ಬಸ್ ವ್ಯವಸ್ಥೆ ಮಾಡಲಾಗಿದೆ.

ಬೈಂದೂರಿನ ಶಿರೂರು ಗ್ರೀನ್ ವ್ಯಾಲಿ ಇಂಟರ್‌ನ್ಯಾಷನಲ್ ಸ್ಕೂಲ್, ಕುಂದಾಪುರದ ಭಂಡಾಕರ್ಸ್ ಮತ್ತು ವಿಜ್ಞಾನ ಕಾಲೇಜು ಉಡುಪಿಯ ಸೈಂಟ್ ಸಿಸಿಲಿಸ್ ಸ್ಕೂಲ್ ಬ್ರಹ್ಮಗಿರಿ, ಕಾಪು ದಂಡತೀರ್ಥ ಪಿ.ಯು. ಕಾಲೇಜು, ಕಾರ್ಕಳದ ಕ್ರೈಸ್ಟ್ ಕಿಂಗ್ ಪಿ.ಯು. ಕಾಲೇಜಿನಲ್ಲಿ ತರಬೇತಿ ನಡೆಯಲಿದೆ.

ಉಚಿತ ಬಸ್ ವ್ಯವಸ್ಥೆ:

ಎರಡನೇ ಹಂತದ ತರಬೇತಿಗೆ ನಿಯೋಜಿಸಿರುವ ಅಧಿಕಾರಿ, ಸಿಬಂದಿಗೆ ತರಬೇತಿ ಕಾರ್ಯಾಗಾರಕ್ಕೆ ಭೇಟಿ ನೀಡಲು ಉಚಿತ ಬಸ್ ವ್ಯವಸ್ಥೆಯನ್ನು ಎಲ್ಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾಡಲಾಗಿದೆ. ತರಬೇತಿ ಕಾರ್ಯಾಗಾರ ಸ್ಥಳಗಳಿಗೆ ಪ್ರಯಾಣಿಸಲು ಈ ಕೆಳಗೆ ತಿಳಿಸಿರುವ ಸ್ಥಳಗಳಿಂದ ಬಸ್ಸುಗಳು ಹೊರಡಲಿದೆ.

ಸಂಪರ್ಕಿಸಬೇಕಾದ ಅಧಿಕಾರಿಗಳ ವಿವರ:

ಬೈಂದೂರು ತಾಲೂಕು ಆಡಳಿತ ಸೌಧ:

ಭೀಮಪ್ಪ – 8105025695, ಕಾಂತರಾಜು -9482036207

ಕುಂದಾಪುರದ ಶಾಸ್ತ್ರೀ ಸರ್ಕಲ್‌:

ಶ್ರೀಶಾಂತ್ – 9620428828, ಭಾಗ್ಯಲಕ್ಷ್ಮೀ – 9481144043, ವಾಲೇಕರ್- 9341049161, ರಂಗರಾಜು -8197809032

ಉಡುಪಿ ಹಳೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ:

ಅಶ್ವಥ್- 9113042711, ಪುನೀತ್- 9036681599, ಜಗದೀಶ್ ಮುರನಾಳ- 8310498064

ಕಾಪು ಸರ್ವಿಸ್ ಬಸ್ ನಿಲ್ದಾಣದಲ್ಲಿ:

ಸುಧೀರ್ ಕುಮಾರ್ ಶೆಟ್ಟಿ- 9008922727, ವಿಜಯಾ- 9845162068, ಕ್ಲಾರೆನ್‌ಸ್‌ ಲೆಸ್ಟಾನ್ – 8095101024

ಕಾರ್ಕಳ ಬಂಡೀಮಠದಲ್ಲಿ:

ಮಂಜುನಾಥ ನಾಯ್ಕ್- 9880019100, ಮಹೇಶ್ ಕುಮಾರ್- 9741560924, ಆನಂದ ಬಿ.-9844111931.

ಮೇ 2ರಂದು ಬೆಳಗ್ಗೆ 7 ಗಂಟೆಗೆ ನಿಗದಿತ ಸ್ಥಳದಿಂದ ಬಸ್‌ಗಳು ಹೊರಡಲಿದೆ ಎಂದು ಪ್ರಕಟನೆ ತಿಳಿಸಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News