Tuesday, July 23, 2024
Homeಸುದ್ದಿರಾಜ್ಯಅಮಿತ್ ಶಾ ರ‍್ಯಾಲಿ ವೇಳೆ ಕೂಲ್ ಡ್ರಿಂಕ್ಸ್ ಲೂಟಿ : ವ್ಯಾಪಾರಿಗೆ ನಷ್ಟದ ಹಣ ಹಿಂತಿರುಗಿಸಿ...

ಅಮಿತ್ ಶಾ ರ‍್ಯಾಲಿ ವೇಳೆ ಕೂಲ್ ಡ್ರಿಂಕ್ಸ್ ಲೂಟಿ : ವ್ಯಾಪಾರಿಗೆ ನಷ್ಟದ ಹಣ ಹಿಂತಿರುಗಿಸಿ Sorry ಕೇಳಿದ ಸಂಸದ ಪ್ರತಾಪ್ ಸಿಂಹ

ಚುನಾವಣೆಗೆ ಇನ್ನು 9 ದಿನ ಬಾಕಿ ಇದೆ. ಈಗಾಗಲೇ ಕೇಂದ್ರ ನಾಯಕರು ರಾಜ್ಯದಲ್ಲಿ ಬೀಡು ಬಿಟ್ಟಿದ್ದಾರೆ. ರಾಜ್ಯ ನಾಯಕರೊಂದಿಗೆ ಸೇರಿ ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ನಿನ್ನೆ ಗದಗ ಜಿಲ್ಲೆಯಲ್ಲಿ ನಡೆದ ರ‍್ಯಾಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಿದ್ದರು. ಲಕ್ಷಾಂತರ ಜನರು ಈ ರ‍್ಯಾಲಿಯಲ್ಲಿ ಸೇರಿದ್ದರು. ಈ ವೇಳೆ ವ್ಯಕ್ತಿಯೊಬ್ಬ ವಾಹನದಲ್ಲಿ ಬಂದು ವ್ಯಾಪಾರ ದೃಷ್ಟಿಯಿಂದ ಕೂಲ್ ಡ್ರಿಂಕ್ಸ್ ಮಾರುತ್ತಿದ್ದನು. ಆದರೆ ಈ ವೇಳೆ ಬಿಜೆಪಿ ಕಾರ್ಯಕರ್ತರು ಆತನ ಬಳಿಯಿಂದ ಕೂಲ್ ಡ್ರಿಂಕ್ಸ್ ಲೂಟಿ ಮಾಡಿದ್ದಾರೆ.

ಸಮೀರ್ ಹಸನ್ ಸಾಬ್ ಎಂಬಾತ ಅಮಿತ್ ಶಾ ರ‍್ಯಾಲಿಯಲ್ಲಿ ಕೂಲ್ ಡ್ರಿಂಕ್ಸ್ ಮಾರುತ್ತಿದ್ದನು. ಈ ವೇಳೆ ಬಿಜೆಪಿಯ ಕಾರ್ಯಕರ್ತರು ಆತನ ವಾಹನದಲ್ಲಿದ್ದ ಕೂಲ್ ಡ್ರಿಂಕ್ಸ್ ಗಳನ್ನು ಹಣ ಕೊಡದೆ ಹೊತ್ತೊಯ್ದಿದ್ದಾರೆ. ಹೀಗಾಗಿ ಸಮೀರ್ ಹಸನ್ ಸಾಬ್ ಗೆ 35 ಸಾವಿರ ರೂಪಾಯಿ ನಷ್ಟವಾಗಿದೆ.

ಸಮೀರ್ಗೆ ಹಣ ಹಿಂತಿರುಗಿಸಿದ ಮೈಸೂರು ಸಂಸದ ಪ್ರತಾಪ್ ಸಿಂಹ..:

ಹಣ ಕೊಡದೆ ಕೂಲ್ ಡ್ರಿಂಕ್ಸ್ ಹೊತ್ತೊಯ್ದರಿಂದ ಸಮೀರ್ಗೆ ನಷ್ಟವಾಗಿದೆ. ನಷ್ಟದಿಂದ ಆತ ಕಣ್ಣೀರು ಹಾಕಿದ್ದಾನೆ. ಈ ವಿಚಾರ ತಿಳಿದುಬಂದಂತೆ ಮೈಸೂರು ಸಂಸದ ಪ್ರತಾಪ್ ಸಿಂಹ ಮಾನವೀಯತೆ ಮೆರೆದಿದ್ದಾರೆ. ನಷ್ಟ ಅನುಭವಿಸಿದ ಸಮೀರ್ಗೆ ಹಣವನ್ನು ಕಳುಹಿಸಿದ್ದಾರೆ. ಮಾತ್ರವಲ್ಲದೆ ಈ ಸಂಗತಿಯನ್ನು ತಮ್ಮ ಟ್ವಿಟರ್ ಖಾತೆಯಲ್ಲೂ ಹಂಚಿಕೊಂಡಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News