Monday, April 22, 2024
Homeಸುದ್ದಿರಾಷ್ಟ್ರೀಯಪ್ರಿಯಕರನಿಗೆ ಕೈ ಕೊಟ್ಟು ಆತನ ತಂದೆಯೊಂದಿಗೆ 20ರ ಹರೆಯದ ಯುವತಿ ಜೂಟ್

ಪ್ರಿಯಕರನಿಗೆ ಕೈ ಕೊಟ್ಟು ಆತನ ತಂದೆಯೊಂದಿಗೆ 20ರ ಹರೆಯದ ಯುವತಿ ಜೂಟ್

ಪ್ರೀತಿ ಮಾಡೋದು ತಪ್ಪೇನಿಲ್ಲ..ಅಂತ ಎಲ್ಲ ಹೇಳ್ತಾರಲ್ಲ.. ಕನ್ನಡದ ‘ಹಳ್ಳಿ ಮೇಷ್ಟು’ ಸಿನಿಮಾ ನೋಡಿದವರಿಗೆ ಈ ಹಾಡು ನೆನಪಿಗೆ ಬರೋದು ಪಕ್ಕಾ. ಆದ್ರೆ ವಿಚಾರ ಏನ್ ಗೊತ್ತಾ. ನಿಜ ಜೀವನದಲ್ಲಿ ಪ್ರೀತಿ, ಕ್ರಶ್ ಆಗೋದು ಸಾಮಾನ್ಯ. ಬಹುಪಾಲು ಜನರು ಪ್ರೀತಿಲಿ ಬಿದ್ದೇ ಬೀಳುತ್ತಾರೆ. ಅದರಂತೆಯೇ 20ರ ಹರೆಯದ ಯುವತಿಯೊಬ್ಬಳು ಅದೇ ವಯಸ್ಸಿನ ಯುವಕನನ್ನು ಪ್ರೀತಿ ಮಾಡಿದ್ದಳು. ಆದರೇ ಆಕೆ ಓಡಿ ಹೋಗಿದ್ದು ಮಾತ್ರ ಆತನ ತಂದೆಯೊಂದಿದೆ.

ಇಂತಹದೊಂದು ಅಚ್ಚರಿಯ ಪ್ರಕರಣ ಭಾರತದಲ್ಲಿ ಬೆಳಕಿಗೆ ಬಂದಿದೆ. ಸದ್ಯ ಯುವತಿ ಪೊಲೀಸರ ಕೈಗೆ ಸಿಕ್ಕಿದ್ದಾಳೆ.

ಉತ್ತರ ಪ್ರದೇಶದ ಕಾನ್ಪುರ ನಗರದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.

ಯುವತಿ ತನ್ನನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸಿದ 20 ವರ್ಷದ ಬಾಯ್ ಫ್ರೆಂಡ್ ಬಿಟ್ಟು ಆತನ ತಂದೆಯೊಂದಿಗೆ ಕಾಲ್ಕಿತ್ತಿದ್ದಾಳೆ. ಅಷ್ಟು ಮಾತ್ರವಲ್ಲ ತಂದೆ-ತಾಯಿಯನ್ನು ಮರೆತು ಪ್ರಿಯಕರನ ತಂದೆಯೊಂದಿಗೆ ಜೂಟ್ ಆಗಿದ್ದಾಳೆ.

ಮೇಸ್ತ್ರಿಯೊಂದಿಗೆ ಪರಾರಿ

ಕಮಲೇಶ್ ಮತ್ತು ಆತನ ಮಗ ಅಮಿತ್ ಉದ್ಯೋಗಕ್ಕಾಗಿ ಕಾನ್ಪುರಕ್ಕೆ ಬಂದಿದ್ದರು. ಕಮಲೇಶ್ ಮೇಸ್ಟ್ತ್ರಿಯಾಗಿದ್ದ, ಆತನ ಮಗ ಕೂಲಿ ಕೆಲಸ ಮಾಡಿಕೊಂಡು ಜೀವಿಸುತ್ತಿದ್ದ. ಈ ವೇಳೆ ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದ ಯುವತಿಯ ಮೇಲೆ ಅಮಿತ್ಗೆ ಪ್ರೀತಿ ಮೂಡುತ್ತದೆ. ಕೊನೆಗೆ ಆಕೆ ಕೂಡ ಅಮಿತ್ ಪ್ರೀತಿಯನ್ನು ಒಪ್ಪಿಕೊಂಡಿದ್ದಳು.

ಅಮಿತ್ ದಿನ ನಿತ್ಯ ದುಡಿಯಲು ಹೋಗುತ್ತಿದ್ದ. ಅತ್ತ ಆತನ ತಂದೆ ಮನೆಯಲ್ಲಿಯೇ ಇರುತ್ತಿದ್ದರು. ಹೀಗಿರುವಾಗ ಯುವತಿ ಅಮಿತ್ ಮನೆಗೆ ಆಗಾಗ ಬರುತ್ತಿದ್ದಳು. ಹೀಗೆ ಬರುತ್ತಿದ್ದ ಯುವತಿಗೆ ಅಮಿತ್ ತಂದೆ ಕಮಲೇಶ್ ಜೊತೆಗೆ ಒಡನಾಟ ಬೆಳೆಯುತ್ತದೆ. ಕೊನೆಗೆ ಇಬ್ಬರು ಪ್ರೀತಿಗೆ ಬಿದ್ದು ಆ ಊರು ಬಿಡಲು ನಿರ್ಧರಿಸುತ್ತಾರೆ.

ಅಂದಹಾಗೆಯೇ, ಕಳೆದ ವರ್ಷ ಈ ಘಟನೆ ನಡೆದಿದ್ದು, ಮಾರ್ಚ್ ತಿಂಗಳಿನಲ್ಲಿ ಇವರಿಬ್ಬರು ಓಡಿ ಹೋಗುತ್ತಾರೆ. ಈ ಸುದ್ದಿ ಯುವತಿ ಮನೆಯವರಿಗೆ ತಿಳಿಯುತ್ತಿದಂತೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡುತ್ತಾರೆ.

ದೂರಿನ ಅನ್ವಯ ತನಿಖೆಯನ್ನು ಪ್ರಾರಂಭಿಸುತ್ತಾರೆ. ಆದರೆ ಒಂದು ವರ್ಷದ ಬಳಿಕ ಯುವತಿ ಸಿಕ್ಕಿದ್ದಾಳೆ. ಆಕೆ ದೆಹಲಿಯಲ್ಲಿ ಪತ್ತೆಯಾಗಿದ್ದಾಳೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News