Tuesday, April 23, 2024
Homeಸುದ್ದಿಕರಾವಳಿಪಂಜುರ್ಲಿ ದೈವದ ಆರ್ಶಿವಾದ ಪಡೆದ ರಿಷಬ್ ಶೆಟ್ಟಿ: ಶೆಟ್ರಂತೆ ಕಾಣುತ್ತಿದ್ದಾರೆ ನೋಡಿ ಈ ದೈವ ನರ್ತಕ

ಪಂಜುರ್ಲಿ ದೈವದ ಆರ್ಶಿವಾದ ಪಡೆದ ರಿಷಬ್ ಶೆಟ್ಟಿ: ಶೆಟ್ರಂತೆ ಕಾಣುತ್ತಿದ್ದಾರೆ ನೋಡಿ ಈ ದೈವ ನರ್ತಕ

ಇಡೀ ದೇಶದಲ್ಲೇ ಸದ್ದು ಮತ್ತು ಸುದ್ದಿ ಮಾಡಿದ್ದ ಕನ್ನಡದ ಹೆಮ್ಮೆಯ ಸಿನಿಮಾ ಕಾಂತಾರ. ಸ್ಯಾಂಡಲ್ವುಡ್ ಖ್ಯಾತ ನಟ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಚಿತ್ರವನ್ನು ಇಡೀ ಜಗತ್ತಿನಲ್ಲಿ ಸದ್ದು ಮಾಡಿತ್ತು. ಇದೀಗ ನಟ ರಿಷಬ್ ಶೆಟ್ಟಿಗೆ ಪಂಜುರ್ಲಿ ದೈವ ಆಶೀರ್ವಾದ ಮಾಡುತ್ತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.



ದಕ್ಷಿಣ ಕನ್ನಡ ಜಿಲ್ಲೆಯ ಮುತ್ತೂರು ನೆಟ್ಟಿಲ ಪಂಜುರ್ಲಿ ದೈವದ ನೇಮೋತ್ಸವದಲ್ಲಿ ರಿಷಬ್ ಶೆಟ್ಟಿ ಭಾಗಿಯಾಗಿದ್ದು. ಈ ವೇಳೆ ರಿಷಬ್ ಪಂಜುರ್ಲಿ ದೈವದ ಆಶೀರ್ವಾದ ಪಡೆದಿದ್ದಾರೆ.

ಕಾಂತಾರ ಚಿತ್ರದಲ್ಲಿ ರಿಷಬ್ ಪಂಜುರ್ಲಿ ದೈವದ ಪಾತ್ರದಲ್ಲಿ ಕಾಣಿಸಿಕೊಂಡಿದ್ರು. ಸಿನಿಮಾ ಗ್ರ್ಯಾಂಡ್ ಸಕ್ಸಸ್ ನಂತರ ರಿಷಬ್ ಕುಟುಂಬ ಸಮೇತ ಬಂದು ದೈವಕ್ಕೆ ವಿಶೇಷ ಪೂಜೆ ಕೂಡ ಸಲ್ಲಿಸಿದ್ರು. ಇದೀಗ ಪಂಜುರ್ಲಿ ದೈವದ ಆಶೀರ್ವಾದವನ್ನ ರಿಷಬ್ ಪಡೆದುಕೊಂಡಿದ್ದಾರೆ.





ಸದ್ಯ ನಟ ರಿಷಬ್ ಶೆಟ್ಟಿ ಕಾಂತಾರ 2 ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ಬ್ಯುಸಿಯ ನಡುವೆ ನಟ ರಿಷಬ್ ಶೆಟ್ಟಿ ದೈವದ ಆಶೀರ್ವಾದ ಪಡೆಯಲು ಬಂದಿರುವುದು ವಿಶೇಷವಾಗಿತ್ತು. ಇನ್ನು ಈ ವೀಡಿಯೋವನ್ನು ನೋಡಿದ ನೆಟ್ಟಿಗರು ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಪಂಜುರ್ಲಿ ದೈವದ ವೇಷವನ್ನು ಹಾಕಿದ್ದರು. ಇದೀಗ ನಟ ರಿಷಬ್ ಶೆಟ್ಟಿಯಂತೆ ಮುತ್ತೂರು ನೆಟ್ಟಿಲ ಪಂಜುರ್ಲಿ ದೈವದ ನೇಮೋತ್ಸವದಲ್ಲಿದ್ದ ಪಂಜುರ್ಲಿ ದೈವ ಸೇಮ್ ರಿಷಬ್ ಶೆಟ್ಟಿಯಂತೆ ಕಾಣುತ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News