ಉಡುಪಿ: ಪೂರ್ವಾನುಮತಿಯಿಲ್ಲದೆ ಡಿಜೆ : ಪ್ರಕರಣ ದಾಖಲು

ಉಡುಪಿ, ಏ.28: ಕೊರಂಗ್ರಪಾಡಿ ಪರಿಸರದಲ್ಲಿ ಪೂರ್ವಾನುಮತಿ ಇಲ್ಲದೆ ಡಿಜೆ ಸೌಂಡ್‌ ಹಾಕಿ ಕಿರುಕುಳ ನೀಡುತ್ತಿದ್ದ ಕಾರಣಕ್ಕೆ ಪ್ರಕರಣ ದಾಖಲಾಗಿದೆ.

ಎ.27ರಂದು ಕೊರಂಗ್ರಪಾಡಿ ಗ್ರಾಮದ ಪಿಲಿಚಾಮುಂಡಿ ದೇವಸ್ಥಾನದ ಬಳಿ ಅಶೋಕ್‌ ಅವರ ಮನೆಯ ಅಂಗಳದಲ್ಲಿ ಶಾಮಿಯಾನ ಹಾಕಿ, ಯಾವುದೇ ಪರವಾನಿಗೆ ಅಥವಾ ಪೂರ್ವಾನುಮತಿ ಇಲ್ಲದೆ ಡಿ.ಜೆ.ಸೌಂಡ್ಸ್‌ ಹಾಕಿಕೊಂಡು ನೃತ್ಯ ಮಾಡಲಾಗುತ್ತಿತ್ತು.

ಸ್ಥಳದಲ್ಲಿದ್ದ ಸೌಂಡ್‌ ಬಾಕ್ಸ್‌ ಸಹಿತ ಇತರ ಪರಿಕರಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You cannot copy content from Baravanige News

Scroll to Top