Wednesday, April 24, 2024
Homeಸುದ್ದಿರಾಜ್ಯಆಸ್ತಿ ವಿವರ ಸಲ್ಲಿಸದ 33 ರಾಜಕಾರಣಿಗಳ ಪಟ್ಟಿ ಬಿಡುಗಡೆ ಮಾಡಿದ ಲೋಕಾಯುಕ್ತ

ಆಸ್ತಿ ವಿವರ ಸಲ್ಲಿಸದ 33 ರಾಜಕಾರಣಿಗಳ ಪಟ್ಟಿ ಬಿಡುಗಡೆ ಮಾಡಿದ ಲೋಕಾಯುಕ್ತ

ಬೆಂಗಳೂರು : ಕರ್ನಾಟಕ ಲೋಕಾಯುಕ್ತ ಕಾಯ್ದೆ ಪ್ರಕಾರ ಪ್ರತಿವರ್ಷ ಶಾಸಕರು ಹಾಗೂ ಅವರ ಕುಟುಂಬ ಸದಸ್ಯರ ಆಸ್ತಿ ವಿವರಗಳನ್ನು ಸಲ್ಲಿಕೆ ಮಾಡಬೇಕು. ಆದರೆ, 2021-22ನೇ ಸಾಲಿಗೆ ಸಚಿವರು ಸೇರಿದಂತೆ ಹಲವು ಶಾಸಕರು ಆಸ್ತಿ ವಿವರಗಳನ್ನು ಸಲ್ಲಿಕೆ ಮಾಡದೆ ಕಾನೂನಿನ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದೀಗ ಆಸ್ತಿ ವಿವರ ನೀಡದ 15 ಮಂದಿ ಶಾಸಕರು ಮತ್ತು 18 ಮಂದಿ ವಿಧಾನ ಪರಿಷತ್‌ ಸದಸ್ಯರ ಹೆಸರುಗಳನ್ನು ಬಹಿರಂಗಪಡಿಸಲಾಗಿದೆ.

ಸಚಿವ ಶ್ರೀರಾಮುಲು, ಮಾಜಿ ಸಚಿವರಾದ ಜಮೀರ್‌ ಅಹ್ಮದ್‌, ಎನ್‌. ಮಹೇಶ್‌ ಆಯನೂರು ಮಂಜುನಾಥ್, ಎಂ.ಪಿ ಕುಮಾರಸ್ವಾಮಿ ಮುಂತಾದವರ ಹೆಸರು ಈ ಪಟ್ಟಿಯಲ್ಲಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News