Wednesday, April 24, 2024
Homeಸುದ್ದಿಕರಾವಳಿಚುನಾವಣೆ ಕಣದಲ್ಲಿ ಸ್ಟಾರ್‌ವಾರ್‌ ಆರಂಭ: ಮಹಿಳಾ ನಾಯಕಿಯರಿಗೂ ಅಗ್ರಸ್ಥಾನ

ಚುನಾವಣೆ ಕಣದಲ್ಲಿ ಸ್ಟಾರ್‌ವಾರ್‌ ಆರಂಭ: ಮಹಿಳಾ ನಾಯಕಿಯರಿಗೂ ಅಗ್ರಸ್ಥಾನ

ಉಡುಪಿ: ವಿಧಾನಸಭೆ ಚುನಾವಣೆಯ ಮತದಾನಕ್ಕೆ ಹದಿನಾಲ್ಕು ದಿನ ಬಾಕಿ ಇದ್ದು, ಸ್ಟಾರ್‌ ಪ್ರಚಾರಕರ ಅಬ್ಬರವೂ ಏರತೊಡಗಿದೆ.
ಸ್ಟಾರ್‌ ಪ್ರಚಾರಕರ ಸುತ್ತಾಟ ಆರಂಭವಾಗಿದ್ದು, ಎದುರಾಳಿಗಳನ್ನು ಮಾತಿನಿಂದ ತಿವಿಯುವುದು, ಆಕ್ರೋಶ ಹೊರಹಾಕು ವುದು, ಮತದಾರರನ್ನು ಮೆಲುಮಾತು ಗಳಲ್ಲಿ ಸೆಳೆಯುವುದು ಎಲ್ಲ ಪಕ್ಷಗಳ ರ್ಯಾಲಿ, ಸಮಾವೇಶ, ಸಭೆಗಳಲ್ಲಿ ಕಾಣಸಿಗುತ್ತಿವೆ.

ಪ್ರಸ್ತುತ ಜಿಲ್ಲೆಯ ಯಾವ ಕ್ಷೇತ್ರದಲ್ಲೂ ಬಂಡಾಯವಿಲ್ಲ. ಹಾಗೆಯೇ ಅಭ್ಯರ್ಥಿ ವಿರುದ್ಧ ಅಪಸ್ವರವೂ ಎಲ್ಲೂ ಇಲ್ಲ. ಮನೆ ಮನೆ ಭೇಟಿ, ಗಲ್ಲಿಗಲ್ಲಿಗಳಲ್ಲಿ ಪ್ರಚಾರ ಭರಾಟೆ ನಡೆದಿದೆ. ಬಿಜೆಪಿ, ಕಾಂಗ್ರೆಸ್‌ ನ ರೋಡ್‌ ಶೋ, ಸಮಾವೇಶಗಳಿಗೆ ರಾಜ್ಯ, ರಾಷ್ಟ್ರಮಟ್ಟದ ನಾಯಕರು ಆಗಮಿಸಿ ಕಳೆ ತುಂಬ ತೊಡಗಿದ್ದಾರೆ. ಮೇ 10ರಂದು ನಡೆಯುವ ಮತದಾನಕ್ಕೆ ಎರಡು ದಿನ ಮುನ್ನ ಬಹಿರಂಗ ಪ್ರಚಾರ ಅಂತ್ಯವಾಗುತ್ತದೆ. ಅಲ್ಲಿಯವರೆಗೂ ಸ್ಟಾರ್‌ ಪ್ರಚಾರಕರ ಝಲಕ್‌ ಮುಂದುವರಿಯಲಿದೆ.

ಆಡಳಿತ ಪಕ್ಷದ ನಾಯಕರು ವಿಪಕ್ಷ ಮುಖಂಡರ ವಿರುದ್ಧ ಹರಿಹಾಯ್ದರೆ, ವಿಪಕ್ಷದವರು ಆಡಳಿತ ಪಕ್ಷದವರ ವಿರುದ್ಧದ ವಾಗ್ಧಾಳಿ ತಾರಕಕ್ಕೇರಲಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್‌, ರಾಜ್ಯದ ಪ್ರಮುಖರಾದ ಯಡಿಯೂರಪ್ಪ, ನಳಿನ್‌ ಕುಮಾರ್‌ ಕಟೀಲ್‌ ಮೊದಲಾದವರು ಬಿಜೆಪಿ ಪಾಳಯದಲ್ಲಿ, ವಿಪಕ್ಷದ ಶಿಬಿರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಷ್ಟ್ರೀಯ ಮುಖಂಡ ರಾಹುಲ್‌ ಗಾಂಧಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮೊದ ಲಾದವರು ಇದ್ದಾರೆ.

ಉಡುಪಿ, ಕುಂದಾಪುರ, ಕಾರ್ಕಳ, ಬೈಂದೂರು, ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರು ಹೆಚ್ಚಿದ್ದಾರೆ. ಎಲ್ಲ ಪಕ್ಷದವರೂ ಮಹಿಳಾ ಮತದಾರರ ಮನವೊಲಿಸಲು ರಾಜ್ಯ, ರಾಷ್ಟ್ರಮಟ್ಟದ ಮಹಿಳಾ ಪ್ರಮುಖರನ್ನು ಕರೆಸಿ, ಸಣ್ಣ ಸಣ್ಣ ಗುಂಪುಗಳಲ್ಲಿ ಸಭೆ ಸೇರಿಸಿ ಪ್ರಚಾರದಲ್ಲಿ ತೊಡಗಲಾಗುತ್ತಿದೆ. ಬಿಜೆಪಿ ಮಹಿಳಾ ವಿಭಾಗದಿಂದ ಎಲ್ಲ ಕ್ಷೇತ್ರಗಳ ಮಹಿಳಾ ಪ್ರಮುಖರಿಗೆ ತರಬೇತಿ ನೀಡಲಾಗಿದೆ. ಕಾಂಗ್ರೆಸ್‌ಸಹ ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕಿಯರನ್ನು ಕರೆಸಿ ಬ್ಲಾಕ್‌ ಹಂತದಲ್ಲಿ ಸಮಾವೇಶ ನಡೆಸಲು ಮುಂದಾಗಿದೆ. ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿಯವರನ್ನು ಜಿಲ್ಲೆಗೆ ಕರೆಸುವ ಪ್ರಯತ್ನವೂ ಚಾಲ್ತಿಯಲ್ಲಿದೆ.

ಸಾಲು ಸಾಲು ಸಮಾವೇಶಗೋಷ್ಠಿ ಜಿಲ್ಲೆಯಲ್ಲಿ ಜೆಡಿಎಸ್‌ ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದರೂ ದೊಡ್ಡ ಮಟ್ಟದ ಸಮಾವೇಶಗಳನ್ನು ಇನ್ನೂ ಆಯೋಜನೆ ಮಾಡಿಲ್ಲ. ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಅಥವಾ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರನ್ನು ಜಿಲ್ಲೆಗೆ ಆಹ್ವಾನಿಸುವ ಸಾಧ್ಯತೆ ಇದೆ. ಬಿಜೆಪಿ ಮತ್ತು ಕಾಂಗ್ರೆಸ್‌ ಎಲ್ಲ ಕ್ಷೇತ್ರಗಳಲ್ಲೂ ಪ್ರತ್ಯೇಕ ಸಭೆ, ಸಮಾವೇಶ ಹಾಗೂ ಗೋಷ್ಠಿ ಗಳನ್ನು ಆಯೋಜಿಸುತ್ತಿದೆ. ಈಗಾಗಲೇ ಸಮಾವೇಶಕ್ಕೆ ಬೇಕಾದ ಪರವಾನಿಗೆಯನ್ನು ತೆಗೆದುಕೊಳ್ಳುತ್ತಿದ್ದಾರೆ. ಚುನಾವಣೆ ಮುಗಿ ಯುವವರೆಗೂ ಸಮಾ ವೇಶ ನಡೆಸಲು ಆಲೋಚಿಸುತ್ತಿವೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News