Friday, March 29, 2024
Homeಸುದ್ದಿರಾಷ್ಟ್ರೀಯಐಪಿಎಲ್ ನ ಮೊದಲಾರ್ಧ ಪೂರ್ಣ: ಹೀಗಿದೆ ಪಾಯಿಂಟ್ಸ್ ಟೇಬಲ್

ಐಪಿಎಲ್ ನ ಮೊದಲಾರ್ಧ ಪೂರ್ಣ: ಹೀಗಿದೆ ಪಾಯಿಂಟ್ಸ್ ಟೇಬಲ್

ಐಪಿಎಲ್ ಸೀಸನ್ 16 ರ ಮೊದಲಾರ್ಧ ಪೂರ್ಣಗೊಂಡಿದೆ. ಎಲ್ಲಾ ತಂಡಗಳು 7 ಪಂದ್ಯಗಳನ್ನು ಆಡಿದ್ದು, ಇನ್ನು ದ್ವಿತಿಯಾರ್ಧದಲ್ಲಿ ಏಳು ಪಂದ್ಯಗಳನ್ನು ಆಡಬೇಕಿದೆ.

ಇತ್ತ ಮೊದಲಾರ್ಧದ ಮುಕ್ತಾಯದೊಂದಿಗೆ ಅಂಕಪಟ್ಟಿಯಲ್ಲೂ ಕೆಲ ಬದಲಾವಣೆ ಕಂಡು ಬಂದಿದೆ.

ಅದರಂತೆ 7 ಪಂದ್ಯಗಳಲ್ಲಿ ಅತ್ಯಧಿಕ ಜಯ ಸಾಧಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನದಲ್ಲಿದೆ. ಹಾಗೆಯೇ 7 ಪಂದ್ಯಗಳಲ್ಲಿ 4 ಜಯ ಸಾಧಿಸಿರುವ ಆರ್ಸಿಬಿ ಮೊದಲಾರ್ಧದಲ್ಲಿ ಟಾಪ್-4 ನಲ್ಲಿ ಕಾಣಿಸಿಕೊಳ್ಳುವಲ್ಲಿ ವಿಫಲವಾಗಿದೆ.

ಮೊದಲಾರ್ಧದಲ್ಲಿ ಒಟ್ಟು 35 ಪಂದ್ಯಗಳನ್ನು ಆಡಲಾಗಿದ್ದು, ಅದರಂತೆ ಮಂಗಳವಾರ ಅಂತ್ಯಕ್ಕೆ ಐಪಿಎಲ್ ಪಾಯಿಂಟ್ಸ್ ಟೇಬಲ್ನ ವಿವರ ಈ ಕೆಳಗಿನಂತಿದೆ…

1- ಚೆನ್ನೈ ಸೂಪರ್ ಕಿಂಗ್ಸ್ (10 ಅಂಕಗಳು): 7 ಪಂದ್ಯಗಳನ್ನಾಡಿರುವ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಸಿಎಸ್ಕೆ ತಂಡವು 3 ಸೋಲು ಮತ್ತು 5 ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ತಂಡದ ಪ್ರಸ್ತುತ ಪಾಯಿಂಟ್ಸ್ ಟೇಬಲ್ ನೆಟ್ ರನ್ ರೇಟ್ +0.662.

2- ಗುಜರಾತ್ ಟೈಟಾನ್ಸ್ (10 ಅಂಕಗಳು): ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವು ಆಡಿರುವ 7 ಪಂದ್ಯಗಳಲ್ಲಿ 2 ಸೋಲು ಹಾಗೂ 5 ಗೆಲುವು ದಾಖಲಿಸಿದೆ. ಈ ಮೂಲಕ +0.580 ನೆಟ್ ರನ್ ರೇಟ್ನೊಂದಿಗೆ 4ನೇ ಸ್ಥಾನದಲ್ಲಿದೆ.

3- ರಾಜಸ್ಥಾನ್ ರಾಯಲ್ಸ್ (8 ಅಂಕಗಳು): 7 ಪಂದ್ಯಗಳನ್ನಾಡಿರುವ ರಾಜಸ್ಥಾನ್ ರಾಯಲ್ಸ್ ತಂಡವು 4 ಗೆಲುವು ಹಾಗೂ 3 ಸೋಲಿನೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ 2ನೇ ಸ್ಥಾನ ಅಲಂಕರಿಸಿದೆ. ಆರ್ಆರ್ ತಂಡದ ಪ್ರಸ್ತುತ ನೆಟ್ ರನ್ ರೇಟ್ ನೆಟ್ +0.844.

4- ಲಕ್ನೋ ಸೂಪರ್ ಜೈಂಟ್ಸ್ (8 ಅಂಕಗಳು): 7 ಪಂದ್ಯಗಳಲ್ಲಿ 3 ಸೋಲು ಹಾಗೂ 4 ಗೆಲುವು ದಾಖಲಿಸಿರುವ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡವು +0.547 ನೆಟ್ ರನ್ ರೇಟ್ನೊಂದಿಗೆ ಮೂರನೇ ಸ್ಥಾನ ಅಲಂಕರಿಸಿದೆ.

5- ರಾಯಲ್ ಚಾಲೆಂಜರ್ಸ್ ಬೆಂಗಳೂರು (8 ಅಂಕಗಳು): ಫಾಫ್ ಡುಪ್ಲೆಸಿಸ್ ನೇತೃತ್ವದ ಆರ್ಸಿಬಿ ತಂಡವು 7 ಪಂದ್ಯಗಳನ್ನು ಮುಗಿಸಿದ್ದು, ಇದರಲ್ಲಿ 4 ಪಂದ್ಯಗಳಲ್ಲಿ ಗೆದ್ದರೆ, 3 ರಲ್ಲಿ ಸೋತಿದೆ. ಇದಾಗ್ಯೂ ಮೈನಸ್ ನೆಟ್ ರನ್ ರೇಟ್ (-0.008) ಹೊಂದಿರುವ ಕಾರಣ 5ನೇ ಸ್ಥಾನದಲ್ಲೇ ಉಳಿದಿದೆ.

6 – ಪಂಜಾಬ್ ಕಿಂಗ್ಸ್ (8 ಅಂಕಗಳು): ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡವು ಆಡಿರುವ 7 ಪಂದ್ಯಗಳಲ್ಲಿ 4 ಜಯ ಸಾಧಿಸಿದ್ದು, ಹಾಗೆಯೇ 3 ರಲ್ಲಿ ಸೋಲು ಕಂಡಿದೆ. ಇದೀಗ -0.162 ನೆಟ್ ರನ್ ರೇಟ್ನೊಂದಿಗೆ 6ನೇ ಸ್ಥಾನ ಅಲಂಕರಿಸಿದೆ.

7- ಮುಂಬೈ ಇಂಡಿಯನ್ಸ್ (6 ಅಂಕಗಳು): ಆಡಿರುವ 7 ಪಂದ್ಯಗಳಲ್ಲಿ 3 ಜಯ ಹಾಗೂ 4 ಸೋಲಿನೊಂದಿಗೆ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ -0.620 ನೆಟ್ ರನ್ ರೇಟ್ ಪಡೆದು 7ನೇ ಸ್ಥಾನದಲ್ಲಿದೆ.

8- ಕೊಲ್ಕತ್ತಾ ನೈಟ್ ರೈಡರ್ಸ್ (4 ಅಂಕಗಳು): ಕೆಕೆಆರ್ ಆಡಿರುವ 7 ಪಂದ್ಯಗಳಲ್ಲಿ 5 ಸೋಲು, 2 ಗೆಲುವು ಕಂಡಿದೆ. ಇದೀಗ -0.186 ನೆಟ್ ರನ್ ರೇಟ್ ಹೊಂದಿರುವ ನಿತೀಶ್ ರಾಣಾ ಪಡೆಯು 8ನೇ ಸ್ಥಾನದಲ್ಲಿದೆ.


9- ಸನ್ರೈಸರ್ಸ್ ಹೈದರಾಬಾದ್ (4 ಅಂಕಗಳು): ಆಡಿರುವ 7 ಪಂದ್ಯಗಳಲ್ಲಿ 2 ರಲ್ಲಿ ಜಯ ಸಾಧಿಸಿ, 4 ಮ್ಯಾಚ್ನಲ್ಲಿ ಸೋತಿರುವ ಸನ್ರೈಸರ್ಸ್ ಹೈದರಾಬಾದ್ ತಂಡವು -0.725 ನೆಟ್ ರನ್ ರೇಟ್ನೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ 9ನೇ ಸ್ಥಾನದಲ್ಲಿದೆ.

10- ಡೆಲ್ಲಿ ಕ್ಯಾಪಿಟಲ್ಸ್ (4 ಅಂಕಗಳು): ಡೇವಿಡ್ ವಾರ್ನರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆಡಿರುವ 7 ಪಂದ್ಯಗಳಲ್ಲಿ 2 ರಲ್ಲಿ ಜಯ ಸಾಧಿಸಿದೆ. ಈ ಮೂಲಕ ಡೆಲ್ಲಿ ತಂಡವು -0.961 ನೆಟ್ ರನ್ ರೇಟ್ನೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆಯ ಸ್ಥಾನದಲ್ಲಿದೆ.

ಮಂಗಳವಾರದವರೆಗೆ (ಏ.23) ಒಟ್ಟು 35 ಪಂದ್ಯಗಳು ಮುಗಿದಿದ್ದು, ಈ ಪಂದ್ಯಗಳ ಬಳಿಕ ಅಪ್ಡೇಟ್ ಆಗಿರುವ ಪಾಯಿಂಟ್ಸ್ ಟೇಬಲ್ ಅನ್ನು ಇಲ್ಲಿ ನೀಡಲಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News