Tuesday, June 18, 2024
Homeಸುದ್ದಿಮಲ್ಪೆ: ಬಂದರಿನಲ್ಲಿ ಬೋಟ್ ನಿಂದ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೀನುಗಾರ ಮೃತ್ಯು

ಮಲ್ಪೆ: ಬಂದರಿನಲ್ಲಿ ಬೋಟ್ ನಿಂದ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೀನುಗಾರ ಮೃತ್ಯು

ಮಲ್ಪೆ ಎ.25: ಬಂದರಿನಲ್ಲಿ ಬೋಟ್ ನಿಂದ ಮೀನು ಖಾಲಿ ಮಾಡುತ್ತಿದ್ದ ವೇಳೆ ಬೋಟ್‌ನಿಂದ ಆಕಸ್ಮಿಕವಾಗಿ ಆಯತಪ್ಪಿ ನೀರಿಗೆ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ನಡೆದಿದೆ

ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ಇವರು ಸಮುದ್ರದಲ್ಲಿ ಮೀನುಗಾರಿಕೆ ಮುಗಿಸಿ ಎ.22 ರಂದು ಬಂದು ಮಲ್ಪೆ ಬಂದರಿನಲ್ಲಿ ಬೋಟ್‌ ನ್ನು ದಕ್ಕೆಗೆ ಕಟ್ಟಿದ್ದರು. ನಿನ್ನೆ ಬೆಳಿಗ್ಗೆ ಬೋಟ್‌ ನಿಂದ ಮೀನು ಖಾಲಿ ಮಾಡುವ ಸಮಯ ಸುನಿಲ್‌ ರಂಗ ಮೊಗೇರಾ ಅವರು ಬೋಟ್‌ ನಿಂದ ಆಯ ತಪ್ಪಿ ಆಕಸ್ಮಿಕವಾಗಿ ದಕ್ಕೆಯ ನೀರಿಗೆ ಬಿದ್ದು ಕಾಣೆಯಾಗಿದ್ದರು. ಇಂದು ಬೆಳಿಗ್ಗೆ ಸುನಿಲ್‌ ರಂಗ ಮೊಗೇರಾ ರವರ ಮೃತ ದೇಹವು ಮಲ್ಪೆ ಬಂದರಿನ ಸ್ಲಾಬ್‌ ದಕ್ಕೆಯ ನೀರಿನಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News