Tuesday, September 10, 2024
Homeಸುದ್ದಿಕಾರ್ಕಳ: ಟಿವಿಎಸ್ ಬೈಕ್‌ಗೆ ಗೂಡ್ಸ್ ವಾಹನ ಡಿಕ್ಕಿ; ಸವಾರರಿಬ್ಬರಿಗೆ ಗಾಯ

ಕಾರ್ಕಳ: ಟಿವಿಎಸ್ ಬೈಕ್‌ಗೆ ಗೂಡ್ಸ್ ವಾಹನ ಡಿಕ್ಕಿ; ಸವಾರರಿಬ್ಬರಿಗೆ ಗಾಯ

ಕಾರ್ಕಳ, ಏ.25: ಗೂಡ್ಸ್ ವಾಹನ ಟಿವಿಎಸ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಗಾಯಗೊಂಡ ಘಟನೆ ಏ. 23 ರಂದು ಕುಂಟಲ್ಪಾಡಿ ಜಂಕ್ಷನ್ ಬಳಿ ಸಂಭವಿಸಿದೆ.

ಉಮೇಶ್ ಪ್ರಭು ಎಂಬವರು ಮಗ ನಾಗರಾಗ ಪ್ರಭು ಅವರನ್ನು ಸಹ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಟಿವಿಎಸ್‌ನಲ್ಲಿ ಕುಂಟಲ್ಪಾಡಿ ಕಡೆಯಿಂದ ಸಾಣೂರು ಗರಡಿ ಕಡೆಗೆ ಸಾಗುತ್ತಿರುವಾಗ ಕುಂಟಲ್ಪಾಡಿ ಬಸ್‌ಸ್ಟ್ಯಾಂಡ್ ಬಳಿ ನಿಟ್ಟೆ ಕಡೆಯಿಂದ ಪುಚ್ಚೇರಿ ಕಡೆಗೆ ಸಾಗುತ್ತಿದ್ದ ಮಹಿಂದ್ರಾ ಗೂಡ್ಸ್ (KA-20-D-4520) ವಾಹನವು ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಸವಾರರಿಬ್ಬರು ರಸ್ತೆಗೆ ಬಿದ್ದಿದ್ದು, ಉಮೇಶ್ ಪ್ರಭುರವರ ತಲೆಗೆ ಹಾಗೂ ದೇಹದ ಇತರ ಕಡೆಗೆ ತೀವ್ರ ತರಹದ ಗಾಯವಾಗಿದ್ದು, ಹಿಂಬದಿ ಸವಾರ ನಾಗರಾಜರವರಿಗೆ ತಲೆಗೆ ಮತ್ತು ಕಾಲಿಗೆ ಗಾಯವಾಗಿರುತ್ತದೆ.

ಈ ಕುರಿತು ಪ್ರತ್ಯಕ್ಷದರ್ಶಿ ನಿಶಾನ್ ಅವರು ನೀಡಿದ ಮಾಹಿತಿಯಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News