Monday, May 27, 2024
Homeಸುದ್ದಿಕರಾವಳಿಶಿರ್ವ: ವಾರೆಂಟ್‌ ಆರೋಪಿಯ ಸೆರೆ ; ನ್ಯಾಯಾಂಗ ಬಂಧನ

ಶಿರ್ವ: ವಾರೆಂಟ್‌ ಆರೋಪಿಯ ಸೆರೆ ; ನ್ಯಾಯಾಂಗ ಬಂಧನ

ಶಿರ್ವ: ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದ ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಪಾದೂರು ಗ್ರಾಮದ ಚಂದ್ರನಗರ ಜನತಾ ಕಾಲನಿ ನಿವಾಸಿ ಇಲಿಯಾಸ್‌ ವಾರೆಂಟ್‌ ಅಸಾಮಿಯನ್ನು ಶಿರ್ವ ಪೊಲೀಸ್‌ ಉಪನಿರೀಕ್ಷಕ ರಾದ ರಾಘವೇಂದ್ರ ಸಿ. (ಕಾನೂನು ಮತ್ತು ಸುವ್ಯವಸ್ಥೆ)ಮತ್ತು ಅನಿಲ್‌ ಕುಮಾರ್‌ ಟಿ. ನಾಯ್ಕ (ತನಿಖೆ) ಮತ್ತು ಎಎಸ್‌ಐ ವಿವೇಕಾನಂದ, ಶ್ರೀಧರ ಮತ್ತು ಪಿಸಿಗಳಾದ ಭಾಸ್ಕರ, ರಘು, ರಾಮರಾಜಪ್ಪ, ಸಂದೀಪ್‌ ಮತ್ತು ಅಖೀಲ್‌ ಎ.22 ರಂದು ಚಂದ್ರನಗರದ ಮನೆಯಲ್ಲಿ ಬಂಧಿಸಿ ಕರೆತಂದಿದ್ದಾರೆ.

ಹೆಡ್‌ಕಾನ್‌ಸ್ಟೆಬಲ್‌ ಭಾಸ್ಕರ್‌ ಮತ್ತು ಪಿಸಿ ಸಂತೋಷ್‌ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ಎ. 28ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿಯನ್ನು ಹಿರಿಯಡ್ಕ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ.

ಈತನ ಮೇಲೆ ಕಾಪು,ಶಿರ್ವ ಮತ್ತು ಕಾರವಾರ ಜಿಲ್ಲೆ ಬನವಾಸಿ ಪೊಲೀಸ್‌ ಠಾಣೆಗಳಲ್ಲಿ 7 ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿಯಿರುತ್ತದೆ ಎಂದು ತಿಳಿದು ಬಂದಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News