Home ಸುದ್ದಿ ರಂಜಾನ್ ಪ್ರಾರ್ಥನೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು

ರಂಜಾನ್ ಪ್ರಾರ್ಥನೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು

ಪವಿತ್ರ ರಂಜಾನ್ ಪ್ರಾರ್ಥನೆಯಲ್ಲಿ ಶ್ರೀರಾಮುಲು ಭಾಗಿಯಾಗಿದ್ದರು. ಬಳ್ಳಾರಿಯ ಈದ್ಗಾ ಮೈದಾನದಲ್ಲಿ ಸಚಿವ ಶ್ರೀರಾಮುಲು ಮುಸ್ಲಿಂ ಬಾಂಧವರ ಜೊತೆ ಪ್ರಾರ್ಥನೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಶ್ರೀರಾಮುಲು ಬಿರು ಬಿಸಿಲಿನಲ್ಲೂ ಮುಸ್ಲಿಂ ಬಾಂಧವರು ಉಪವಾಸ ಮಾಡಿದ್ದಾರೆ. ಭಗವಂತ ಅವರ ಸಂಕಲ್ಪ ಈಡೇರಿಸಲ್ಲಿ ಅಂತ ಪ್ರಾರ್ಥಿಸಿದ್ದಾರೆ. ಇನ್ನೂ, ನಮಗೆ ವಿಶ್ವಾಸವಿದೆ ದೊಡ್ಡ ಸಂಖ್ಯೆಯಲ್ಲಿ ನಾವು ಗೆಲ್ಲುತ್ತೇವೆ. ಕಲ್ಯಾಣ ಕರ್ನಾಟಕದ 41 ಸ್ಥಾನಗಳಲ್ಲಿ 35 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ರಾಮುಲು, ಇಂದು ಬೆಳಗ್ಗೆ ರಂಜಾನ್ ಹಬ್ಬದ ಪ್ರಯುಕ್ತ ನನ್ನ ಮುಸ್ಲಿಂ ಬಾಂಧವರಿಗೆ ಭೇಟಿಯಾಗಿ ಶುಭಾಶಯ ಕೋರಲು ಈದ್ಗಾ ಮೈದಾನಕ್ಕೆ ತೆರಳಿದ್ದೆ. ಅವರು ನನಗೆ ಪ್ರೀತಿಯ ಅಪ್ಪುಗೆ ನೀಡಿದ್ದು ಅತೀವ ಸಂತಸವಾಗಿದೆ. ನಾಡಿನ ಒಳಿತಿಗಾಗಿ ಅವರೊಂದಿಗೆ ಸೇರಿ ದೇವರಲ್ಲಿ ಪ್ರಾರ್ಥಿಸಿಕೊಂಡ ಕ್ಷಣಗಳು.

Translate »

You cannot copy content from Baravanige News