Home ಸುದ್ದಿ ಕರಾವಳಿ ನೀತಿ ಸಂಹಿತೆ ಉಲ್ಲಂಘಿಸಿ ಪೋಸ್ಟ್‌ : ಪ್ರಕರಣ ದಾಖಲು

ನೀತಿ ಸಂಹಿತೆ ಉಲ್ಲಂಘಿಸಿ ಪೋಸ್ಟ್‌ : ಪ್ರಕರಣ ದಾಖಲು

ಕುಂದಾಪುರ: ಸಾಮಾಜಿಕ ಜಾಲತಾಣದಲ್ಲಿ ಶಾಂತಿಯನ್ನು ಕದಡುವ ಹಾಗೂ ಸಾಮಾಜಿಕ ನೆಮ್ಮದಿಗೆ ಭಂಗ ಉಂಟು ಮಾಡುವ ಬರಹ ಬರೆದಿರುವ ಹಾಗೂ ಪೋಸ್ಟ್‌ ಶೇರ್‌ ಮಾಡಿರುವ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

“ಗುರುರಾಜ್‌ ಗಂಟಿಹೊಳೆ ಬೈಂದೂರಿನ ಶಾಸಕರಾಗಲಿ” ಎನ್ನುವ ಹೆಸರಿನಲ್ಲಿರುವ ಫೇಸ್‌ಬುಕ್‌ ಖಾತೆಯಲ್ಲಿ ನವೀನ್‌ ಗಂಗೊಳ್ಳಿಯು ಬರೆದ ಬರಹವು ಸಮಾಜದಲ್ಲಿ ವ್ಯಕ್ತಿಗಳ ಮಧ್ಯೆ ದ್ವೇಷ ಭಾವನೆ ಉಂಟು ಮಾಡಿ, ಧರ್ಮದ ಹೆಸರಲ್ಲಿ ಮತದಾರರನ್ನು ಎತ್ತಿ ಕಟ್ಟುವ ಮೂಲಕ ಶಾಂತಿ ಕದಡುವ, ಸಾಮಾಜಿಕ ನೆಮ್ಮದಿಗೆ ಭಂಗ ಉಂಟು ಮಾಡುವಂತಾಗಿದ್ದು, ಇದನ್ನು ರಾಜೇಶ್‌ ಕೊಠಾರಿ ಎಂಬ ಫೇಸ್‌ಬುಕ್‌ ಹೆಸರಿನಲ್ಲಿರುವ ವ್ಯಕ್ತಿಯ ಶೇರ್‌ ಮಾಡಿರುವುದಾಗಿದೆ. ಈ ಮೂಲಕ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿರುವುದಾಗಿ ಬೈಂದೂರು ಕ್ಷೇತ್ರದ ಚುನಾವಣಾ ಎಫ್‌ಎಸ್‌ಟಿ ಅಧಿಕಾರಿ ವಿಶ್ವನಾಥ್‌ ಅವರು ದೂರು ನೀಡಿದ್ದರು.

Translate »

You cannot copy content from Baravanige News