ದ್ವಿತೀಯ ಪಿಯುಸಿ ಫಲಿತಾಂಶ; ಶಿರ್ವ ಹಿಂದೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅಂಶಿ ಎಸ್ ಶೆಟ್ಟಿ ಜಿಲ್ಲೆಗೆ 4ನೇ ಸ್ಥಾನ

ಶಿರ್ವ: ಹಿಂದೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅಂಶಿ. ಎಸ್. ಶೆಟ್ಟಿ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 591 ಅಂಕಗಳೊಂದಿಗೆ ರಾಜ್ಯಕ್ಕೆ 7ನೇ ಸ್ಥಾನ ಪಡೆದುಕೊಂಡು, ಉಡುಪಿ ಜಿಲ್ಲೆಗೆ ನಾಲ್ಕನೇ ಸ್ಥಾನಿಯಾಗಿರುತ್ತಾರೆ.

ಮಾರ್ಚ್ 2023ರಲ್ಲಿ ನಡೆದ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ, ಮೂಡುಬೆಳ್ಳೆ ಕಟ್ಟಿಂಗೇರಿ ಗ್ರಾಮದ ಸುಧಾಕರ್ ಶೆಟ್ಟಿ ಮತ್ತು ಸವಿತಾ ಶೆಟ್ಟಿ ಅವರ ಮಗಳಾದ ಅಂಶಿ.ಎಸ್. ಶೆಟ್ಟಿ ರಾಜ್ಯಕ್ಕೆ 7ನೇ ಸ್ಥಾನವನ್ನು ಪಡೆದುಕೊಂಡು ಕಾಲೇಜಿಗೆ, ಹೆತ್ತವರಿಗೆ ಹಾಗೂ ಊರಿನವರಿಗೆ ಕೀರ್ತಿಯನ್ನು ತಂದಿರುತ್ತಾರೆ. ಇವರಿಗೆ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಕಾಲೇಜಿನ ಶಿಕ್ಷಕರು ಅಭಿನಂದಿಸಿದ್ದಾರೆ.

You cannot copy content from Baravanige News

Scroll to Top