ಬೈಂದೂರು: ’60 ಹೊಸ ಮುಖಗಳಿಗೆ ಅವಕಾಶ ನೀಡಿರುವುದು ಸ್ವಾಗತಾರ್ಹ’ – ನಟಿ ಶೃತಿ

ಬೈಂದೂರು, ಏ 21: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾಪಾರ್ಟಿ 60 ಹೊಸ ಮುಖಗಳಿಗೆ ಅವಕಾಶ ನೀಡಿರುವುದು ಸ್ವಾಗತಾರ್ಹ ಎಂದು ಚಿತ್ರನಟಿ, ಬಿಜೆಪಿ ಸ್ಟಾರ್ ಪ್ರಚಾರಕಿ ಶೃತಿ ಹೇಳಿದ್ದಾರೆ.


ಬೈಂದೂರಿನಲ್ಲಿ ಪಕ್ಷದ ಕಚೇರಿಯಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಸಾಮಾನ್ಯ ಕಾರ್ಯಕರ್ತರ ಪಕ್ಷ ಎನ್ನುವುದನ್ನು ಈ ಬಾರಿ ಮತ್ತೊಮ್ಮೆ ಸಾಬೀತುಪಡಿಸಿದೆ ಎಂದ ಶೃತಿ, ಹೊಸ ಮುಖಗಳು ಶಾಸಕರಾಗುವ ಮೂಲಕ ರಾಜ್ಯದಲ್ಲಿ ಅಮೂಲಾಗ್ರ ಬದಲಾವಣೆಯಾಗಲಿದೆ ಎಂದರು.

ಈಗಾಗಲೇ ಎಲ್ಲಾ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದು, ಪ್ರತಿದಿನ ಮಾಧ್ಯಮಗಳಲ್ಲಿ ಅಭ್ಯರ್ಥಿಗಳ ಆಸ್ತಿ, ಮೌಲ್ಯಗಳು ಹುಬ್ಬೇರಿಸುತ್ತಿವೆ. ಆದರೆ ಬೈಂದೂರು ಅಭ್ಯರ್ಥಿ ಗುರುರಾಜ ಶೆಟ್ಟಿಯವರ ಗುಣವೇ ಆಸ್ತಿ ಹಾಗೂ ಮೌಲ್ಯವಾಗಿರುವುದು ಬೈಂದೂರಿನ ಜನತೆಯ ಅದೃಷ್ಟ ಎಂದರು. ಈ ಬಾರಿ ಗುರುರಾಜ ಶೆಟ್ಟಿ ಗಂಟಿಹೊಳೆಯವರನ್ನು ಅತ್ಯಧಿಕ ಬಹುಮತದಲ್ಲಿ ಗೆಲ್ಲಿಸುವ ಮೂಲಕ ಬೈಂದೂರು ರಾಜ್ಯಕ್ಕೇ ಮಾದರಿಯಾಗಲಿದೆ ಎಂದು ಹೇಳಿದರು.

You cannot copy content from Baravanige News

Scroll to Top