Wednesday, April 24, 2024
Homeಸುದ್ದಿಉಡುಪಿ: ಮೊಗವೀರ ಮುಖಂಡನ ಮನೆ ಸಹಿತ ರಾಜ್ಯದ ಹಲವೆಡೆ ಐಟಿ ದಾಳಿ

ಉಡುಪಿ: ಮೊಗವೀರ ಮುಖಂಡನ ಮನೆ ಸಹಿತ ರಾಜ್ಯದ ಹಲವೆಡೆ ಐಟಿ ದಾಳಿಉಡುಪಿಯ ಮೊಗವೀರ ಮುಖಂಡ, ಕ್ಲಾಸ್ 1ಗುತ್ತಿಗೆದಾರ ಜಿ.ಶಂಕರ್, ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿರುವ ದಿವಂಗತ ನಂದಕುಮಾರ ಪಾಟೀಲ, ಹನಮಂತಗೌಡ ಪಾಟೀಲ ಅವರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಉಡುಪಿ ಕಿದಿಯೂರಿನ ಜಿ.ಶಂಕರ್ ಅವರ ಮನೆ, ಫ್ಯಾಮಿಲಿ ಟ್ರಸ್ಟ್, ಸಭಾ ಭವನಗಳಿಗೆ ಏಕಕಾಲದಲ್ಲಿ ಆದಾಯ ತೆರಿಗೆಯ ಇಲಾಖೆಯ ಅಧಿಕಾರಿಗಳು ನಡೆಸಿದ್ದಾರೆ.

ಅದೇ ರೀತಿ ಮುಧೋಳ ನಂದಕುಮಾರ ಕಾಂಗ್ರೆಸ್ ಕಿಸಾನ ಘಟಕದ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಬಾಗಲಕೋಟೆ ಡಿಸಿಸಿ‌.ಬ್ಯಾಂಕಿನ ನಿರ್ದೇಶಕರಾಗಿದ್ದರು.
ಹಣಮಂತಗೌಡ ಪಾಟೀಲ ಉದ್ಯಮಿಯಾಗಿದ್ದಾರೆ, ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದು, ಯಾವುದೇ ಹುದ್ದೆ ಹೊಂದಿರಲಿಲ್ಲ.

ಮುದ್ದೇಬಿಹಾಳ ಹತ್ತಿರ ಇರುವ ಬಾಲಾಜಿ ಸಕ್ಕರೆ ಕಾರ್ಖಾನೆ ನಿರ್ದೇಶಕರಾಗಿದ್ದರು. ಕಾರ್ಖಾನೆಯಲ್ಲಿ ಇತ್ತೀಚೆಗೆ ಎಸ್.ಅರ್. ಪಾಟೀಲ ಭಾವಚಿತ್ರ ಇರುವ ಗೋಡೆ ಗಡಿಯಾರ, ಟೀ‌ಶರ್ಟ್ ಗಳು ಸಿಕ್ಕಿದ್ದೆ ಎನ್ನಲಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News