Monday, May 29, 2023
Homeಸುದ್ದಿಕರಾವಳಿಬಿಜೆಪಿ ರಾಜ್ಯಾಧ್ಯಕ್ಷರಿಗೆ ಬೈಯುವ ಆಡಿಯೋ ವೈರಲ್‌: ದೂರು

ಬಿಜೆಪಿ ರಾಜ್ಯಾಧ್ಯಕ್ಷರಿಗೆ ಬೈಯುವ ಆಡಿಯೋ ವೈರಲ್‌: ದೂರು

ಮಂಗಳೂರು: ಸಂಸದ, ಬಿಜೆಪಿ ರಾಜ್ಯಾಧ್ಯಕ್ಷರಿಗೆ ವ್ಯಕ್ತಿಯೋರ್ವ ಏಕವಚನದಲ್ಲಿ ಅವಾಚ್ಯವಾಗಿ ಬೈಯುವ ಆಡಿಯೋ ವೈರಲ್‌ ಆಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

ನಳಿನ್‌ 2019ರ ಲೋಕಸಭಾ ಚುನಾವಣೆ ಯಲ್ಲಿ ಗೆದ್ದ ಸಂದರ್ಭ ಮುಸ್ಲಿಂ ಧರ್ಮಗುರು ಗಳು ತಮ್ಮ ಬೆಂಬಲಿಗರೊಂದಿಗೆ ನಳಿನ್‌ ಅವರಲ್ಲಿಗೆ ಆಗಮಿಸಿ ಹೂಗುತ್ಛ ನೀಡಿ ಅಭಿನಂದಿಸಿ
ಫೋಟೋ ತೆಗೆಸಿಕೊಂಡಿದ್ದರು.

ಆದರೆ ಈಗ ಯಾರೋ ದುಷ್ಕರ್ಮಿ ಆ ಫೋಟೋವನ್ನು ಜಾಲತಾಣದಲ್ಲಿ ಹಾಕಿ ಅದರೊಂದಿಗೆ ನಳಿನ್‌ ಅವರಿಗೆ ಏಕವಚನದಲ್ಲಿ, ಅವಾಚ್ಯ ಶಬ್ದ ಗಳಿಂದ ಬೈಯುವ ಆಡಿಯೋ ವೈರಲ್‌ ಮಾಡಿ ದ್ದಾನೆ. ಈ ಬಗ್ಗೆ ಬಿಜೆಪಿ ಕಾನೂನು ಪ್ರಕೋಷ್ಠ ದಿಂದ ಪೊಲೀಸರಿಗೆ ದೂರು ನೀಡಲಾಗಿದೆ. ದುಷ್ಕರ್ಮಿಯನ್ನು ಪತ್ತೆ ಹಚ್ಚಿ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಆಯುಕ್ತರನ್ನು ಒತ್ತಾಯಿಸಲಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಜಗದೀಶ ಶೇಣವ ತಿಳಿಸಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News