Saturday, April 20, 2024
Homeಸುದ್ದಿಕರಾವಳಿನಾಮಪತ್ರ ಸಲ್ಲಿಸಿದ ಪ್ರಮೋದ್ ಮುತಾಲಿಕ್ : ಆಸ್ತಿಗಿಂತ ಪೊಲೀಸ್ ಕೇಸ್ ಗಳೇ ಜಾಸ್ತಿ..!!!

ನಾಮಪತ್ರ ಸಲ್ಲಿಸಿದ ಪ್ರಮೋದ್ ಮುತಾಲಿಕ್ : ಆಸ್ತಿಗಿಂತ ಪೊಲೀಸ್ ಕೇಸ್ ಗಳೇ ಜಾಸ್ತಿ..!!!

ಮಂಗಳೂರು: ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಉಡುಪಿ ಜಿಲ್ಲೆಯ ಕಾರ್ಕಳದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ನಾಮಪತ್ರದಲ್ಲಿ ಆಸ್ತಿ ವಿವರದ ಬಗ್ಗೆ ಅಫಿಡೆವಿಟ್ ಸಲ್ಲಿಸಿದ್ದು, ಇದರಲ್ಲಿ ಅವರ ಬಳಿ ಯಾವುದೇ ಸ್ಥಿರಾಸ್ತಿ, ಚರಾಸ್ತಿ, ವಾಹನಗಳಿಲ್ಲ. ಆದರೆ ರಾಜ್ಯದ 7 ವಿವಿಧ ಪೊಲೀಸ್ ಠಾಣೆಗಳಲ್ಲಿ ಸೌಹಾರ್ಧಕ್ಕೆ ಧಕ್ಕೆ ತಂದಿರುವ ಆರೋಪಗಳ ಪ್ರಕರಣಗಳಿವೆ.

ನಾಮಪತ್ರದಲ್ಲಿ ಆಸ್ತಿ ವಿವರದ ಬಗ್ಗೆ ಅಫಿಡೆವಿಟ್ ಸಲ್ಲಿಸಿದ್ದು, ಇದರಲ್ಲಿ ಅವರ ಬಳಿ ಯಾವುದೇ ಸ್ಥಿರಾಸ್ತಿ, ಚರಾಸ್ತಿ, ವಾಹನಗಳಿಲ್ಲ. ಕೈಯಲ್ಲಿ 10,500 ರೂ. ನಗದು ಮತ್ತು ಬ್ಯಾಂಕುಗಳಲ್ಲಿ 2,63,500 ರೂ. ಠೇವಣಿ ಹಣವಿದೆ. ಇದನ್ನು ಬಿಟ್ಟರೆ ಬೇರೆ ಯಾವುದೇ ಚರಾಸ್ತಿ ಅಥವಾ ಸ್ಥಿರಾಸ್ತಿ ಸ್ವಂತ ವಾಹನ ಅಥವಾ ಸಾಲ ಇಲ್ಲವೆಂದು ಘೋಷಣೆ ಮಾಡಿದ್ದಾರೆ.

ಯಾದಗಿರಿ ಠಾಣೆ (ಪ್ರಚೋದನಾಕಾರಿ ಭಾಷಣ ಮತ್ತು ಸಶಸ್ತ್ರ ಕಾಯ್ದೆ ಉಲ್ಲಂಘನೆ), ಶೃಂಗೇರಿ ಠಾಣೆ (ಮಾನನಷ್ಟ ಮೊಕದ್ದಮೆ), ಬೆಂಗಳೂರು ಹೈಗೌಂಡ್ಸ್ ಠಾಣೆ (ಪ್ರಚೋದನಾಕಾರಿ ಭಾಷಣ, ಜೀವ ಬೆದರಿಕೆ, ಧರ್ಮಗಳ ನಡುವೆ ದ್ವೇಷ ಭಾವನೆ, ಧಾರ್ಮಿಕ ಭಾವನೆಗೆ ಧಕ್ಕೆ), ಬಬಲೇಶ್ವರ ಠಾಣೆ (ದಾರ್ಮಿಕ ಭಾವನೆಗೆ ಧಕ್ಕೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದನೆ), ಬಾಗಲಕೋಟೆಯ ನವಸಾಗರ ಠಾಣೆ (ಧಾರ್ಮಿಕ ಭಾವನೆಗಳಿಗೆ ಧಕ್ಕೆ ಪ್ರಚೋದನೆ, ಕೋಮು ಗಲಭೆ, ಜೀವ ಬೆದರಿಕೆ), ಜೇವರ್ಗಿ ಠಾಣೆ (ಧಾರ್ಮಿಕ ಭಾವನೆಗೆ ಧಕ್ಕೆ, ಪ್ರಚೋದನೆ, ಕೋಮು ಗಲಭೆ, ಜೀವ ಬೆದರಿಕೆ), ಮುರುಡೇಶ್ವರ ಠಾಣೆ (ಮತೀಯ ಭಾವನೆಗೆ ಧಕ್ಕೆ, ಪ್ರಚೋದನಕಾರಿ ಹೇಳಿಕೆ, ಅವಹೇಳನ, ಆದೇಶ ಉಲ್ಲಂಘನೆ) ಸೇರಿ ಒಟ್ಟು 7 ಪ್ರಕರಣಗಳು ಪ್ರಮೋದ್ ಮುತಾಲಿಕ್ ಮೇಲಿವೆ.

ಆದಾಯ ಮೂಲವನ್ನು ದೇಣಿಗೆ ಸಂಗ್ರಹ, ಉದ್ಯೋಗ ಸಮಾಜಸೇವೆ ಎಂದು ಚುನಾವಣೆ ಆಯೋಗಕ್ಕೆ ಸಲ್ಲಿಸಿರುವ ಅಫಿಡೆವಿಟ್‌ನಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News