ಕೊಡಗು: ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಇದ್ದರೂ ಸಹ ಕೊಡಗಿನ ಖಾಸಗಿ ಸಮಾರಂಭಗಳಲ್ಲಿ ಮದ್ಯ ಪೂರೈಕೆಗೆ ಅನುಮತಿ ನೀಡಲಾಗಿದೆ.
ಮದುವೆ ಸಮಾರಂಭಗಳಲ್ಲಿ ಮದ್ಯ ಪೂರೈಕೆಗೆ ಅನುಮತಿ ನೀಡುವಂತೆ ಅಬಕಾರಿ ಇಲಾಖೆಗೆ ರಾಜ್ಯ ಜಂಟಿ ಚುನಾವಣಾಧಿಕಾರಿ ಸೂಚನೆ ನೀಡಿದ್ದಾರೆ. ಇದರಿಂದ ಕೊಡವರಿಗೆ ಸಂತೋಷನ್ನುಂಟು ಮಾಡಿದೆ. ಕೊಡವರ ಮದುವೆಗಳಲ್ಲಿ ಮುಕ್ತವಾದ ಬಾರನ್ನೇ ತೆರೆದಿರಲಾಗುತ್ತದೆ. ಮದುವೆ ಸಮಾರಂಭದಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಪೆಗ್ಗು ಹಾಕಿಕೊಂಡು ಡಾನ್ಸ್ ಮಾಡಿ ಎಂಜಾಯ್ ಮಾಡುತ್ತಾರೆ. ಆದರೆ, ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಇದಕ್ಕೆಲ್ಲ ಬ್ರೇಕ್ ಹಾಕಿತ್ತು. ಮದುವೆ, ಸಮಾರಂಭಗಳಲ್ಲಿ ಮದ್ಯದ ವ್ಯವಸ್ಥೆ ಮಾಡಬಾರದು ಎಂದು ಚುನಾವಣೆ ಆಯೋಗ ಆದೇಶ ಹೊರಡಿಸಿತ್ತು.
ಈ ಬೆನ್ನಲ್ಲೇ ಮದುವೆ ಇಟ್ಟುಕೊಂಡವರು ಕಂಗಾಲಾಗಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಸಂಪ್ರದಾಯಕ್ಕೆ ಅಡ್ಡಿ ಮಾಡಬಾರದು ಎಂದು ಕೊಡವ ಸಮಾಜ , ಗೌಡ ಸಮಾಜ ಮನವಿ ಮಾಡಿದ್ದವು. ಮದ್ವೆಗಳಲ್ಲಿ ಮದ್ಯ ಪೂರೈಕೆ ನಿರ್ಬಂಧ ಆದೇಶ ಹಿಂಪಡೆಯುವಂತೆ ಚುನಾವಣಾ ಆಯೋಗ ಮನವಿ ಮಾಡಿದ್ದರು. ಇದರಿಂದ ಇದೀಗ ನಿರ್ಬಂಧ ಸಡಿಲಿಸಿ ಆದೇಶ ಹೊರಡಿಸಲಾಗಿದೆ.
ಕೊಡಗು ಅಂದ್ರೆ ಅಲ್ಲಿ ಒಂದಲ್ಲೊಂದು ವಿಶೇಷ. ವೈಶಿಷ್ಟ್ಯ ಕಾಣಸಿಗುತ್ತದೆ. ಇಲ್ಲಿಯ ಆಚಾರ-ವಿಚಾರಗಳು ಕೂಡ ವಿಭಿನ್ನ. ಸದ್ಯ ವಿವಾಹವಾಗಲು ಚೈತ್ರ ಕಾಲವಾಗಿರುವುದರಿಂದ ಜಿಲ್ಲೆಯಲ್ಲಿ ಮದುವೆಯ ಭರಾಟೆ ಜೋರಾಗಿದೆ. ಇದೀಗ ಮದ್ವೆಗಳಲ್ಲಿ ಮದ್ಯ ಪಾರ್ಟಿಗೂ ಅವಕಾಶ ಸಿಕ್ಕಿದ್ದು, ಕೊಡವರ ಖುಷಿ ಮತ್ತಷ್ಟು ಹೆಚ್ಚಿಸಿದೆ.
ಕೊಡಗಿನಲ್ಲಿ ಮದುವೆ ಸೇರಿದಂತೆ ಯಾವುದೇ ಸಮಾರಂಭಗಳಲ್ಲಿ ಮುಕ್ತ ಬಾರ್ಗಳನ್ನು ತೆರೆಯುವುದಕ್ಕೆ ಅವಕಾಶ ಇಲ್ಲ. ಮುಕ್ತ ಬಾರ್ ತೆರೆಯಲು ಅವಕಾಶ ನೀಡಿದರೆ ಅದನ್ನು ದುರುಪಯೋಗ ಪಡಿಸಿಕೊಂಡು ಮತದಾರರಿಗೆ ಮದ್ಯ ಹಂಚಿಕೆ ಮಾಡುವ ಸಾಧ್ಯತೆ ಇರಬಹುದು ಎಂದು ಚುನಾವಣಾ ಆಯೋಗ ಅದಕ್ಕೆ ಕಡಿವಾಣ ಹಾಕಿತ್ತು.
ಕೊಡಗಿನಲ್ಲಿ ಮದುವೆ ಸಮಾರಂಭದಲ್ಲಿ ಎಣ್ಣೆ ಪಾರ್ಟಿಗೆ ಗ್ರೀನ್ ಸಿಗ್ನಲ್
