ಶಿರ್ವ: ಕುಸಿದು ಬಿದ್ದು ವ್ಯಕ್ತಿ ಸಾವು

ಶಿರ್ವ, ಏ.17: ಕುಡಿತದ ಚಟ ಹೊಂದಿದ್ದ ಯುವಕನೋರ್ವ ಕುಸಿದು ಬಿದ್ದು ಮೃತಪಟ್ಟ ಘಟನೆ ಎ.16 ರಂದು ಶಿರ್ವ ಚೆಕ್ ಪಾದೆ ಬಳಿ ನಡೆದಿದೆ.

ಕಳತ್ತೂರು ಪೈಯಾರು ಪಿ.ಕೆ.ಎಸ್ ಪ್ರೌಢಶಾಲೆ ಬಳಿಯ ನಿವಾಸಿ ಹರೀಶ್ ನಾಯ್ಕ್ (45) ಮೃತಪಟ್ಟವರು.

ಎ.16 ರಂದು ಸಂಜೆ ಶಿರ್ವ ಪೇಟೆಗೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೊರಟಿದ್ದರು. ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರನಾಗಿ ಬಂದಿದ್ದ ಅವರು ಶಿರ್ವ ಚೆಕ್ ಪಾದೆ ಬಳಿ ತಲುಪಿದಾಗ ತನಗೆ ತಲೆ ಸುತ್ತು ಬರುವುದಾಗಿ ವಾಹನ ಸವಾರನಲ್ಲಿ ತಿಳಿಸಿ ವಾಹನದಿಂದ ಇಳಿದಿದ್ದಾರೆ. ಬಳಿಕ ಕುಸಿದು ಬಿದ್ದ ಅವರನ್ನು ಸಾರ್ವಜನಿಕರು ಸೇರಿ ಉಪಚರಿಸಿ ಚೆಕ್ ಪಾದೆ ಬಸ್ ನಿಲ್ದಾಣದಲ್ಲಿ ಮಲಗಿಸಿದ್ದಾರೆ. ಸಾರ್ವಜನಿಕರು ಆತನ ಸಹೋದರನಿಗೆ ಕರೆ ಮಾಡಿ ತಿಳಿಸಿದ್ದು, ಸಹೋದರ ಬಂದು ನೋಡಿದಾಗ ಆತ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಸಹೋದರ ಸುರೇಶ್ ನಾಯ್ಕ್ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You cannot copy content from Baravanige News

Scroll to Top