Monday, May 29, 2023
Homeಸುದ್ದಿಕರಾವಳಿಹಾಲಾಡಿ ಆಶೀರ್ವಾದ ಪಡೆದ ಗುರುರಾಜ್ ಗಂಟಿಹೊಳೆ

ಹಾಲಾಡಿ ಆಶೀರ್ವಾದ ಪಡೆದ ಗುರುರಾಜ್ ಗಂಟಿಹೊಳೆ

ಕುಂದಾಪುರ : ಕರಾವಳಿ ಭಾಗದ ಪ್ರಭಾವಿ ನಾಯಕ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರನ್ನು ಶನಿವಾರ ಬೆಳಗ್ಗೆ ಬೈಂದೂರು ಬಿಜೆಪಿ ಅಭ್ಯರ್ಥಿ, ಯುವ ನಾಯಕ ಗುರುರಾಜ್ ಗಂಟಿಹೊಳೆ ಅವರು ಹಾಲಾಡಿಯವರ ನಿವಾಸದಲ್ಲಿ ಭೇಟಿಯಾಗಿ, ಆಶೀರ್ವಾದ ಪಡೆದು, ಸಹಕಾರ ಕೋರಿದರು.

ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಹಾಲಾಡಿ ಶ್ರೀನಿವಾಸ ಶೆಟ್ರು, ಪಕ್ಷದ ಹಿರಿಯ ನಾಯಕರು, ಪ್ರಮುಖರು ನನಗೆ ಬೈಂದೂರು ಕ್ಷೇತ್ರದ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಮನವಿ‌ ಮಾಡಿದ್ದಾರೆ. ಇದು ನನ್ನ ಕರ್ತವ್ಯವೂ ಹೌದು. ಯುವ ನಾಯಕ ಗುರುರಾಜ್ ಅವರಿಗೆ ನಿಮ್ಮೆಲ್ಲರ ಬೆಂಬಲ, ಸಹಕಾರ ಬೇಕಾಗಿದೆ ಎಂದರು.

ಗುರುರಾಜ್ ಗಂಟಿಹೊಳೆ ಮಾತನಾಡಿ, ಹಾಲಾಡಿ ಶ್ರೀನಿವಾಸ ಶೆಟ್ಟರು ನಮಗೆಲ್ಲ ಆದರ್ಶಪ್ರಾಯರು. ಅವರ ಆರ್ಶಿವಾದವನ್ನು ಪಡೆದಿದ್ದೇನೆ. ಅವರ ಬೆಂಬಲ, ಸಹಕಾರವಿಂದು ಸಿಕ್ಕಿದೆ.‌ ಈಗ ನನಗೆ ಧೈರ್ಯ ಬಂದಿದೆ. ಅವರ ಸಾಮಾಜಿಕ ಕೈಂಕರ್ಯ ನಮಗೆಲ್ಲ ಮಾದರಿ ಎಂದು ಹೇಳಿದಲ್ಲದೆ ಬೈಂದೂರು ಹಾಲಿ ಶಾಸಕ ಸುಕುಮಾರ್ ಶೆಟ್ಟರನ್ನು ಭೇಟಿಯಾಗಿದ್ದು, ಅವರು ಸಹ ನಾನಿದ್ದೇನೆ, ಹೆದರಬೇಡ, ಧೈರ್ಯದಿಂದ ಇರು ಎನ್ನುವ ಮಾತನ್ನು ಕೊಟ್ಟಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News