Wednesday, April 24, 2024
Homeಸುದ್ದಿರಾಜ್ಯಆ ಸಮಯದಲ್ಲಿ 'ರಾಕಿ' ಎಲ್ಲಿದ್ದ..!!?? KGF Chapter 3 ಬಗ್ಗೆ ಸುಳಿವು ಕೊಟ್ಟ ಹೊಂಬಾಳೆ

ಆ ಸಮಯದಲ್ಲಿ ‘ರಾಕಿ’ ಎಲ್ಲಿದ್ದ..!!?? KGF Chapter 3 ಬಗ್ಗೆ ಸುಳಿವು ಕೊಟ್ಟ ಹೊಂಬಾಳೆ

ಕನ್ನಡ ಚಿತ್ರರಂಗವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಕೆಜಿಎಫ್ ಚಾಪ್ಟರ್ 2 ಚಿತ್ರ ಬಿಡುಗಡೆಯಾಗಿ ಇಂದಿಗೆ (ಏಪ್ರಿಲ್ 14) ಒಂದು ವರ್ಷವಾಗಿದೆ. ಹೊಂಬಾಳೆ ಫಿಲಂಸ್ ನಿರ್ಮಿಸಿದ್ದ ಚಿತ್ರವು ದೇಶದಾದ್ಯಂತ ಹವಾ ಸೃಷ್ಟಿಸಿತ್ತು. ಪ್ರಶಾಂತ್ ನೀಲ್ ಅವರು ಆ್ಯಕ್ಷನ್ ಕಟ್ ಹೇಳಿದ್ದ ಚಿತ್ರದಲ್ಲಿ ಯಶ್ ಅವರು ರಾಕಿ ಭಾಯ್ ಆಗಿ ಮಿಂಚಿದ್ದರು.

ಇಂದು ಕೆಜಿಎಫ್ 2 ಚಿತ್ರದ ವರ್ಷಾಚರಣೆಯನ್ನು ಅಭಿಮಾನಿಗಳು ಆಚರಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯ ಪೋಸ್ಟರ್, ವಿಡಿಯೋ ಹಾಕಿ ಸಂಭ್ರಮಿಸುತ್ತಿದ್ದಾರೆ.

ಇದೇ ವೇಳೆ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ವಿಡಿಯೋ ಬಿಡುಗಡೆ ಮಾಡಿದೆ. ಅದರಲ್ಲಿ ಕೆಜಿಎಫ್ 3 ಬಗ್ಗೆಯೂ ಸುಳಿವು ನೀಡಿದೆ.

“ಎಲ್ಲಕ್ಕಿಂತ ದೊಡ್ಡ ಘರ್ಷಣೆಗೆ ಇನ್ನಷ್ಟೇ ಸಾಕ್ಷಿಯಾಗಬೇಕಿದೆ” ಎಂದು ವಿಡಿಯೋದಲ್ಲಿ ಹೇಳಿದೆ. ಅಲ್ಲದೆ “1978ರಿಂದ 1981ರವರೆಗೆ ರಾಕಿ ಎಲ್ಲಿದ್ದ” ಎಂದು ಕೇಳಿದೆ.


ಕೆಜಿಎಫ್ ಮೊದಲ ಎರಡು ಭಾಗದಲ್ಲಿ ರಾಕಿಯ ಬಾಲ್ಯ, ಮುಂಬೈ ದಿನಗಳು, ಕೆಜಿಎಫ್ ಗೆ ಎಂಟ್ರಿ, ಸಾಮ್ರಾಜ್ಯ ಮತ್ತು ಅವನತಿಯನ್ನು ತೋರಿಸಲಾಗಿತ್ತು. ಆದರೆ ಇದರ ನಡುವೆ 1978 ರಿಂದ 1981ವರೆಗೆ ರಾಕಿ ಭಾಯ್ ಎಲ್ಲಿದ್ದ ಎನ್ನುವುದನ್ನು ತೋರಿಸಿಲ್ಲ. ಇದನ್ನು ಬಹುಶಃ ಚಾಪ್ಟರ್ 3ರಲ್ಲಿ ಹೇಳಲಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್.

ಸದ್ಯ ಪ್ರಶಾಂತ್ ನೀಲ್ ಅವರು ಪ್ರಭಾಸ್ ಜೊತೆಗೆ ಸಲಾರ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಕೆಜಿಎಫ್ ಚಾಪ್ಟರ್ 2 ಬಿಡುಗಡೆಯಾಗಿ ವರ್ಷವಾದರೂ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಮುಂದಿನ ಪ್ರಾಜೆಕ್ಟ್ ಘೋಷಿಸಿಲ್ಲ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News