Tuesday, July 23, 2024
Homeಸುದ್ದಿಕರಾವಳಿ(ಎ.14) ಆದರ್ಶ ಫ್ರೆಂಡ್ಸ್ ಮಕ್ಕೇರಿಬೈಲು, ಸೂಡ ಇದರ ದಶಮಾನೋತ್ಸವ ಮತ್ತು ಯುಗಾದಿ ಸಂಭ್ರಮ!

(ಎ.14) ಆದರ್ಶ ಫ್ರೆಂಡ್ಸ್ ಮಕ್ಕೇರಿಬೈಲು, ಸೂಡ ಇದರ ದಶಮಾನೋತ್ಸವ ಮತ್ತು ಯುಗಾದಿ ಸಂಭ್ರಮ!

ಸೂಡ: ಆದರ್ಶ ಫ್ರೆಂಡ್ಸ್ ಮಕ್ಕೇರಿಬೈಲು, ಸೂಡ ಇದರ ದಶಮಾನೋತ್ಸವ ಮತ್ತು ಯುಗಾದಿ ಹಬ್ಬದ ಪ್ರಯುಕ್ತ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಅನ್ನಸಂತರ್ಪಣೆ ಎ.14 ರಂದು ನಡೆಯಲಿದೆ.

ಎ.14 ರಂದು ಸಂಜೆ 4 ರಿಂದ 7ರ ವರೆಗೆ ಸಾರ್ವಜನಿಕ ಸತ್ಯನಾರಾಯಣ ಪೂಜೆ ನಡೆಯಲಿದೆ.

ರಾತ್ರಿ 7 ಅನ್ನಸಂತರ್ಪಣೆ., 7.30 ರಿಂದ ಸಾಧಕರಿಗೆ ಸನ್ಮಾನ, ಧಾರ್ಮಿಕ ಸಭಾ ಕಾರ್ಯಕ್ರಮ, ಮಹಿಳಾ ಸಂಗಮ ಕಾರ್ಯಕ್ರಮ ನಡೆಯಲಿದೆ.

ರಾತ್ರಿ 8 ರಿಂದ ಕಲ್ಲಡ್ಕ ವಿಠಲ ನಾಯಕ್ ಮತ್ತು ಬಳಗದವರಿಂದ ವಿನೂತನ ಶೈಲಿಯ ಮೌಲ್ಯಾಧಾರಿತ ಸಂದೇಶ ಸಾರುವ ಕಾರ್ಯಕ್ರಮ ಗೀತಾ-ಸಾಹಿತ್ಯ-ಸಂಭ್ರಮ ಕಾರ್ಯಕ್ರಮ ನಡೆಯಲಿದೆ.

ಎ.15 ಸಂಜೆ 4 ರಿಂದ 7ರವರೆಗೆ ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ ನಡೆಯಲಿದೆ. ರಾತ್ರಿ 7.30 ರಿಂದ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 8 ರಿಂದ 9ರವರೆಗೆ ಸಾಧಕರಿಗೆ ಸನ್ಮಾನ, ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.

ರಾತ್ರಿ 9 ರಿಂದ ತುಳು ಹಾಸ್ಯಮಯ ನಾಟಕ ಕಾಪು ರಂಗತರಂಗ ಕಲಾವಿದರ ‘ಸಮಾಜ ರತ್ನ’ ಲೀಲಾಧರ್ ಶೆಟ್ಟಿ ಸಾರಥ್ಯದ ‘ಬುಡೆದಿ’ ತುಳು ಸಾಂಸಾರಿಕ ಹಾಸ್ಯಮಯ ನಾಟಕ ಮೂಡಿಬರಲಿದೆ..

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News