Wednesday, April 24, 2024
Homeಸುದ್ದಿದಾಖಲೆ ಇಲ್ಲದೆ ಆಟೋದಲ್ಲಿ ಹಣ ಸಾಗಾಟ; 1 ಕೋಟಿ ರೂ. ಸಹಿತ ಇಬ್ಬರು ಪೊಲೀಸ್ ವಶಕ್ಕೆ..!!

ದಾಖಲೆ ಇಲ್ಲದೆ ಆಟೋದಲ್ಲಿ ಹಣ ಸಾಗಾಟ; 1 ಕೋಟಿ ರೂ. ಸಹಿತ ಇಬ್ಬರು ಪೊಲೀಸ್ ವಶಕ್ಕೆ..!!

ಬೆಂಗಳೂರು, ಏ.13: ಆಟೋದಲ್ಲಿ ಸಾಗಿಸುತ್ತಿದ್ದ ದಾಖಲೆ‌ ಇಲ್ಲದ 1 ಕೋಟಿ ರೂಪಾಯಿಗಳನ್ನು ಹಲಸೂರು ಗೇಟ್ ಪೊಲೀಸರು ಸೀಜ್ ಮಾಡಿದ್ದಾರೆ.

ಸುರೇಶ್, ಪ್ರವೀಣ್ ಎನ್ನುವರು ಆಟೋದಲ್ಲಿ 1 ಕೋಟಿ ರೂ.ಗಳನ್ನು ವಿಜಯನಗರದಿಂದ ಜಯನಗರಕ್ಕೆ ಸಾಗಿಸುತ್ತಿದ್ದರು. ಈ ವೇಳೆ ಆಟೋ ಹಲಸೂರು ಗೇಟ್ ಪೊಲೀಸ್ ಠಾಣೆ ಬಳಿ ಕೆಟ್ಟು ನಿಂತಿದೆ. ಪೊಲೀಸರನ್ನು ನೋಡಿದ ಇಬ್ಬರು ಆರೋಪಿಗಳು ಅನುಮಾನಸ್ಪದವಾಗಿ ವರ್ತಿಸುತ್ತಿದ್ದರು.

ಹೀಗಾಗಿ ಪೊಲೀಸರು ಆಟೋ ಬಳಿಗೆ ಬಂದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ 2 ಬ್ಯಾಗ್​ಗಳಲ್ಲಿ 1 ಕೋಟಿ ಹಣ ಪತ್ತೆಯಾಗಿದೆ. ನಂತರ ಹಣದ ಬಗ್ಗೆ ಪೊಲೀಸರು ಇನ್​ಕಮ್ ಟ್ಯಾಕ್ಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಹಲಸೂರು ಗೇಟ್ ಪೊಲೀಸರು ಹಣದ ಬಗ್ಗೆ ದಾಖಲೆಗಳನ್ನು ಕೇಳುತ್ತಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News