Thursday, March 28, 2024
Homeಸುದ್ದಿರಾಷ್ಟ್ರೀಯರಾಷ್ಟ್ರ ಪ್ರಶಸ್ತಿ ವಿಜೇತೆ ನಟಿ ಉತ್ತರಾ ಬಾಕರ್‌ ನಿಧನ

ರಾಷ್ಟ್ರ ಪ್ರಶಸ್ತಿ ವಿಜೇತೆ ನಟಿ ಉತ್ತರಾ ಬಾಕರ್‌ ನಿಧನ

ಮಹಾರಾಷ್ಟ್ರ : ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟಿ, ರಂಗಭೂಮಿ ಕಲಾವಿದೆ ಉತ್ತರಾ ಬಾಕರ್‌ (79) ಅವರು ಪುಣೆಯಲ್ಲಿ ನಿಧನರಾಗಿದ್ದಾರೆ.

ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ತರಬೇತಿ ಪಡೆದು ಹಲವರು ನಾಟಕಗಳಲ್ಲಿ ಅಭಿನಯಿಸಿದ್ದು, ‘ಮುಖ್ಯಮಂತ್ರಿ’ ನಾಟಕದಲ್ಲಿ ಪದ್ಮಾವತಿಯ ಪಾತ್ರ, ‘ಮೇನ ಗುರ್ಜರಿ’ಯಲ್ಲಿ ‘ಮೇನ’ ಎನ್ನುವ ಪಾತ್ರ, ನಾಟಕಕಾರ ಗಿರೀಶ್ ಕಾರ್ನಾಡ್ ಅವರ ‘ತುಘಲಕ್’ ನಲ್ಲಿ ತಾಯಿಯ ಪಾತ್ರವನ್ನು ಮಾಡಿ ಗಮನ ಸೆಳೆದಿದ್ದರು.

ಇನ್ನು ಮೃಣಾಲ್ ಸೇನ್ ಅವರ ಚಲನಚಿತ್ರ ‘ಏಕ್ ದಿನ್ ಅಚಾನಕ್’ ಚಿತ್ರದಲ್ಲಿನ ಉತ್ತರಾ ಬಾಕರ್‌ ಅವರ ಪಾತ್ರಕ್ಕೆ ನ್ಯಾಷನಲ್‌ ಆವಾರ್ಡ್‌ ಕೂಡಬಂದಿತ್ತು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News