Saturday, April 20, 2024
Homeಸುದ್ದಿಉಡುಪಿಗೆ ಯಶ್ಪಾಲ್ ಸುವರ್ಣ, ಕಾಪು-ಸುರೇಶ್ ಶೆಟ್ಟಿ ಗುರ್ಮೆ‌ಗೆ ಟಿಕೆಟ್ ಫೈನಲ್

ಉಡುಪಿಗೆ ಯಶ್ಪಾಲ್ ಸುವರ್ಣ, ಕಾಪು-ಸುರೇಶ್ ಶೆಟ್ಟಿ ಗುರ್ಮೆ‌ಗೆ ಟಿಕೆಟ್ ಫೈನಲ್

ಉಡುಪಿ, ಏ.11: ಹಲವು ಸುತ್ತುಗಳ ಸಭೆ, ಸುದೀರ್ಘ ಸಮಾಲೋಚನೆಗಳ ಬಳಿಕ ಮಂಗಳವಾರ ರಾತ್ರಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಹೈಕಮಾಂಡ್ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ. ಈ ಬಾರಿ 52 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಒಬಿಸಿ –32, ಎಸ್‌ಸಿ –30, ಎಸ್‌ಟಿ– 16 ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ ಎಂದು ಅರುಣ್ ಸಿಂಗ್ ತಿಳಿಸಿದರು.

ಶಿಕಾರಿಪುರದಿಂದ ವಿಜಯೇಂದ್ರ, ಗೋಕಾಕ್‌ನಿಂದ ರಮೇಶ್ ಜಾರಕಿಹೊಳಿ, ಅರಭಾವಿಯಿಂದ ಬಾಲಚಂದ್ರ ಜಾರಕಿಹೊಳಿ, ಮುಧೋಳ – ಗೋವಿಂದ ಕಾರಜೋಳ,‌ ಕುಡಿಚಿಯಿಂದ ರಾಜೀವ್, ನಿಪ್ಪಾಣಿಯಿಂದ ಶಶಿಕಲಾ ಜೊಲ್ಲೆ, ಬೀಳಗಿಯಿಂದ ಮುರುಗೇಶ್ ನಿರಾಣಿ, ವಿಜಯಪುರದಿಂದ ಬಸನಗೌಡ ಪಾಟೀಲ ಯತ್ನಾಳ, ಕಿತ್ತೂರಿನಿಂದ ಮಹಾಂತೇಶ್ ದೊಡಗೌಡರ್​, ಬೈಲಹೊಂಗಲದಿಂದ ಜಗದೀಶ್ ಮೆಟಗುಡ್ಡ, ಸವದತ್ತಿಯಿಂದ ರತ್ನಾ ಮಾಮನಿ, ರಾಮದುರ್ಗದಿಂದ ಚಿಕ್ಕರೇವಣ್ಣ ಕಣಕ್ಕಿಳಿಯಲಿದ್ದಾರೆ.

ಬೆಳಗಾವಿ ಉತ್ತರ – ರವಿ ಪಾಟೀಲ, ಬೆಳಗಾವಿ ದಕ್ಷಿಣ – ಅಭಯ್, ಬೆಳಗಾವಿ ಗ್ರಾಮಾಂತರ – ನಾಗೇಶ್, ಬೆಳಗಾವಿ ಗ್ರಾಮೀಣ – ನಾಗೇಶ್ ಮಾರ್ವಾಡಕರ್, ಬೈಲಹೊಂಗಲ – ಜಗದೀಶ್ ಮೆಟಗೊಡ್, ವಿಜಯನಗರ – ಸಿದ್ದಾರ್ಥ್ ಸಿಂಗ್​, ಬಳ್ಳಾರಿ ಗ್ರಾಮಾಂತರ – ಬಿ.ಶ್ರೀರಾಮುಲು, ಬಳ್ಳಾರಿ ನಗರ – ಸೋಮಶೇಖರ ರೆಡ್ಡಿ, ಹೊನ್ನಾಳಿ – ಎಂ.ಪಿ.ರೇಣುಕಾಚಾರ್ಯ, ಉಡುಪಿ – ಯಶ್​ಪಾಲ್​​ ಸುವರ್ಣ, ಕಾರ್ಕಳ – ವಿ.ಸುನೀಲ್ ಕುಮಾರ್​, ಚಿಕ್ಕಮಗಳೂರು – ಸಿ.ಟಿ.ರವಿ, ಚಿಕ್ಕನಾಯಕಹಳ್ಳಿ – ಜೆ.ಸಿ.ಮಾಧುಸ್ವಾಮಿ, ತಿಪಟೂರು – ಬಿ.ಸಿ.ನಾಗೇಶ್, ತುಮಕೂರು – ಜ್ಯೋತಿ ಗಣೇಶ್, ಕೊರಟಗೆರೆ – ಅನಿಲ್ ಕುಮಾರ್ (ನಿವೃತ್ತ ಐಎಎಸ್ ಅಧಿಕಾರಿ) ಕಣಕ್ಕಿಳಿಯಲಿದ್ದಾರೆ.

ಪಟ್ಟಿ ಬಿಡುಗಡೆಗೂ ಮುನ್ನ ಮಾತನಾಡಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜ್ಯದ 31 ಜಿಲ್ಲೆಗಳಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಸುಮಾರು 25 ಸಾವಿರ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ್ದೇವೆ ಎಂದು ಹೇಳಿದರು.”

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News