Wednesday, April 24, 2024
Homeಸುದ್ದಿಚುನಾವಣೆ ನಿಮಿತ್ತ ಅಕ್ರಮ ತಡೆಗೆ ಕಂಟ್ರೋಲ್‌ ರೂಂ; ದ.ಕ 133, ಉಡುಪಿಯಲ್ಲಿ 95 ದೂರು

ಚುನಾವಣೆ ನಿಮಿತ್ತ ಅಕ್ರಮ ತಡೆಗೆ ಕಂಟ್ರೋಲ್‌ ರೂಂ; ದ.ಕ 133, ಉಡುಪಿಯಲ್ಲಿ 95 ದೂರು

ಉಡುಪಿ/ಮಂಗಳೂರು, ಏ.09: ಚುನಾವಣೆ ನಿಮಿತ್ತ ಅಕ್ರಮ ತಡೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟ್ರೋಲ್‌ ರೂಂ ತೆರೆಯಲಾಗಿದ್ದು, ಉಡುಪಿ ಜಿಲ್ಲೆಯಲ್ಲಿ 95 ಹಾಗೂ ದ.ಕ. ಜಿಲ್ಲೆಯಲ್ಲಿ 133 ದೂರು ದಾಖಲಾಗಿದೆ.

ಫ್ಲೈಯಿಂಗ್‌ ಸ್ಕ್ವಾಡ್‌ ಟೀಮ್‌, ಸ್ಟಾಟಿಕ್‌ ಸರ್ವಿಲೆನ್ಸ್‌ ಟೀಮ್‌, ವೀಡಿಯೋ ಸರ್ವಿಲೆನ್ಸ್‌ ಟೀಮ್‌, ಸೆಕ್ಟರ್‌ ಆಫೀಸರ್‌ ಟೀಮ್‌, ವೀಡಿಯೋ ವ್ಯೂವಿಂಗ್‌ ಟೀಮ್‌, ಎಂಸಿಸಿ ನೋಡಲ್‌ ಆಫೀಸರ್‌, ಅಕೌಂಟ್‌ ಎಕ್ಸ್‌ಪೆಂಡಿಚರ್‌ ಟೀಮ್‌ಗಳನ್ನು ಮಾಡಲಾಗಿದೆ. ಒಂದು ಪಾಳಿಯಲ್ಲಿ 10 ಮಂದಿಯಂತೆ ಒಟ್ಟು 3 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಪತ್ರಿಕೆ, ಸಾಮಾಜಿಕ ಜಾಲತಾಣ, ಎಲೆಕ್ಟ್ರಾನಿಕ್‌ ಮಾಧ್ಯಮಗಳು ನಿಯಮಾವಳಿ ಉಲ್ಲಂ ಸಿದರೂ ಪ್ರಕರಣ ದಾಖಲಿಸಲಾಗುತ್ತಿದೆ.

ಉಡುಪಿ ಜಿಲ್ಲೆಯಲ್ಲಿ ಸಾಮಾ ಜಿಕ ಜಾಲತಾಣದಲ್ಲಿ ನಿಯಮಾವಳಿ ಉಲ್ಲಂ ಸಿರುವುದಕ್ಕೆ 10, ಮುದ್ರಣ ಮಾಧ್ಯಮದಲ್ಲಿ 1 ಹಾಗೂ ಎಲೆಕ್ಟ್ರಾನಿಕ್‌ ಮಾಧ್ಯಮದಲ್ಲಿ 2 ಪ್ರಕರಣಗಳು ದಾಖಲಾಗಿವೆ. ದ.ಕ. ಜಿಲ್ಲೆಯಲ್ಲಿ ಇಲ್ಲಿಯವರೆಗೆ 54 ದೂರುಗಳಲ್ಲಿ 38 ದೂರುಗಳಿಗೆ ಕ್ರಮ ಜರಗಿಸಲಾಗಿದೆ. ಇದರಲ್ಲಿ ಉಳಿದ ದೂರುಗಳು ಸರಿ ಇಲ್ಲ, ಅಪೂರ್ಣ ಮಾಹಿತಿಯ ಅಧಾರದಲ್ಲಿ ರಿಜೆಕ್ಟ್ ಮಾಡಲಾಗಿದೆ. ಸರಿಯಾದ ದೂರುಗಳಿಗೆ ಎಆರ್‌ಒ/ಆರ್‌ಒಗಳ ಮೂಲಕ ಕ್ರಮ ಜರುಗಿಸಲಾಗಿದೆ.

ಅಕ್ರಮ ತಡೆಗಟ್ಟಲು ಸಾರ್ವಜನಿಕರು ದೂರು ನೀಡಲು ಸಿ-ವಿಜಿಲ್‌ ಆ್ಯಪ್‌ ಕೂಡ ಇದೆ. 24 ತಾಸು ನಿರ್ವಹಣೆ ಮಾಡಲು ಕಂಟ್ರೋಲ್‌ ರೂಂ ತೆರೆಯಲಾಗಿದೆ. 0820-2574991 ಸಂಖ್ಯೆಗೆ ಕರೆ ಮಾಡಿ ಮಾಹಿತಿ, ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಕುರಿತು ದೂರು ನೀಡಬಹುದು.

ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣೆಯ ಸಂಬಂಧ ದೂರುಗಳನ್ನು ಸ್ವೀಕರಿಸಲು ಕಂಟ್ರೋಲ್‌ ರೂಂ ತೆರೆಯಲಾಗಿದೆ. 1950 ಟೋಲ್‌ ಫ್ರೀ ನಂಬರ್‌ ಕಂಟ್ರೋಲ್‌ ರೂಂ ದಿನದ 24 ಗಂಟೆ ಕಾರ್ಯಾಚರಣೆ ನಡೆಸುತ್ತಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News