Saturday, July 27, 2024
Homeಸುದ್ದಿಕರಾವಳಿಮಣಿಪಾಲ: ಸೂಕ್ತ ದಾಖಲಾತಿ ಇಲ್ಲದೆ ಸಾಗಿಸುತ್ತಿದ್ದ 100 ಮೂಟೆ ಭತ್ತ ವಶಕ್ಕೆ

ಮಣಿಪಾಲ: ಸೂಕ್ತ ದಾಖಲಾತಿ ಇಲ್ಲದೆ ಸಾಗಿಸುತ್ತಿದ್ದ 100 ಮೂಟೆ ಭತ್ತ ವಶಕ್ಕೆ

ಮಣಿಪಾಲ, ಏ 06: ಸಮರ್ಪಕವಾದ ದಾಖಲಾತಿ ಇಲ್ಲದೇ ಸಾಗಿಸುತ್ತಿದ್ದ 100 ಮೂಟೆ ಭತ್ತ ತುಂಬಿದ ಗೋಣಿ ಚೀಲವನ್ನು ಮಣಿಪಾಲ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆ ನಿಮಿತ್ತ ಎಂ ಐ ಟಿ ಜಂಕ್ಷನ್‌ ಬಳಿ ಪರ್ಕಳ – ಉಡುಪಿ ರಾ.ಹೆ. 169ರಲ್ಲಿ ಮಣಿಪಾಲ ಪೊಲೀಸ್‌ ಠಾಣೆಯ ಪೊಲೀಸ್‌ ಉಪನಿರೀಕ್ಷಕ ರುಕ್ಮ ನಾಯ್ಕ್‌ ದಿಡೀರ್‌ ವಾಹನ ತಪಾಸಣೆ ನಡೆಸುತ್ತಿದ್ದರು.

ಈ ವೇಳೆ ಪರ್ಕಳ ಕಡೆಯಿಂದ ಮಣಿಪಾಲದ ಕಡೆಗೆ KA-31-4536 ಲಾರಿಯ ಚಾಲಕ ಡೇನಿಲ್‌ ಆಂತೋನಿ ಫರ್ನಾಂಡೀಸ್‌ ಎಂಬಾತ ಹಳಿಯಾಳದಿಂದ ಬೆಳ್ತಂಗಡಿ ತಾಲೂಕಿನ ಮಾರುತಿಪುರದ ಅಕ್ಕಿ ಮಿಲ್‌ ಗೆ ಸಮರ್ಪಕವಾದ ದಾಖಲಾತಿ ಇಲ್ಲದೇ 100 ಮೂಟೆ ಭತ್ತ ತುಂಬಿದ ಗೋಣಿ ಚೀಲ ಸಾಗಾಟ ಮಾಡುತ್ತಿರುವುದು ತನಿಖೆ ವೇಳೆ ಕಂಡುಬಂದಿದೆ.

ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 89/2023, ಕಲಂ: 98 KP Act ರಂತೆ ಪ್ರಕರಣ ದಾಖಲಾಗಿರುತ್ತದೆ

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News