Saturday, July 27, 2024
Homeಸುದ್ದಿರಾಜ್ಯ2ನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್..!!!

2ನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್..!!!

ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಉಮೇದುವಾರಿಕೆ ಸಲ್ಲಿಸಲು ಕೈ ಕಲಿಗಳು ಭರ್ಜರಿ ತಯಾರಿ ನಡೆಸಿದ್ದಾರೆ. ಮೊದಲ ಹಂತವಾಗಿ 124 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿರೋ ಕಾಂಗ್ರೆಸ್ ಇದೀಗ ಎರಡನೇ ಪಟ್ಟಿ ಬಿಡುಗಡೆಗೆ ಮಾಡುವ ಮೂಲಕ ಮುಂದಿನ
ಚುನಾವಣೆ ಎದುರಿಸಲು ಸನ್ನದ್ಧವಾಗಿದೆ ಎಂಬುದನ್ನು
ಹೇಳಿದೆ.

124 ಕ್ಷೇತ್ರಗಳಿಗೆ ಕೈ ಸೇನಾನಿಗಳನ್ನ ಕಣಕ್ಕಿಳಿಸಿರೋ ಕಾಂಗ್ರೆಸ್, 100 ಕ್ಷೇತ್ರಗಳ ಪೈಕಿ ಮೊನ್ನೆ 49 ಕ್ಷೇತ್ರಗಳ
ಟಿಕೆಟ್ ಮಾತ್ರ ಫೈನಲ್ ಮಾಡಿದೆ.

ಮಿಕ್ಕ ಕ್ಷೇತ್ರಗಳು ಇನ್ನೂ ಗಂಟಾಗಿಯೇ ಉಳಿದಿವೆ. ಕಳೆದ 2 ದಿನಗಳಿಂದ ಸ್ಕ್ರೀನಿಂಗ್ ಕಮಿಟಿ, ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಅಳೆದು ತೂಗಿ ಅಭ್ಯರ್ಥಿಗಳನ್ನ ಅಂತಿಮಗೊಳಿಸಿದೆ.

ಇಂದು ಕಾಂಗ್ರೆಸ್ 40-45 ಜನರ ಹೆಸರಿರುವ ಪಟ್ಟಿಯನ್ನು
ರಿಲೀಸ್ ಮಾಡಿದೆ. ಉಳಿದ ಹೆಸರು ಬಿಜೆಪಿ ಮತ್ತು ಜೆಡಿಎಸ್ ಹೆಸರು ಘೋಷಣೆ ನಂತರ
ಘೋಷಣೆಯಾಗಲಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News