Thursday, September 28, 2023
Homeಸುದ್ದಿರಾಜ್ಯ'ಕಮಲ' ಹಿಡಿಯಲಿದ್ದಾರಾ ಕಿಚ್ಚ ಸುದೀಪ್..!?? ಕುತೂಹಲ ಕೆರಳಿಸಿದ ಬೊಮ್ಮಾಯಿ ಅವರ 2 ಪ್ರತ್ಯೇಕ ಸುದ್ದಿಗೋಷ್ಠಿ

‘ಕಮಲ’ ಹಿಡಿಯಲಿದ್ದಾರಾ ಕಿಚ್ಚ ಸುದೀಪ್..!?? ಕುತೂಹಲ ಕೆರಳಿಸಿದ ಬೊಮ್ಮಾಯಿ ಅವರ 2 ಪ್ರತ್ಯೇಕ ಸುದ್ದಿಗೋಷ್ಠಿ

ಬೆಂಗಳೂರು (ಎ.5) : ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಮುನ್ನ ರಾಜಕಾರಣಿಗಳು ಪಕ್ಷಾಂತರ ಮಾಡುವುದು ಸಾಮಾನ್ಯ. ಆದರೆ ರಾಜಕಾರಣದಲ್ಲಿದ್ದ ಪ್ರಸ್ತಿದ್ದ ವ್ಯಕ್ತಿಗಳನ್ನು, ಖ್ಯಾತ ಚಲನಚಿತ್ರ ತಾರೆಯರನ್ನು ಪಕ್ಷಕ್ಕೆ ಸೆಳೆದುಕೊಳ್ಳಲು, ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳಲು, ಈ ಮೂಲಕ ಮತದಾರರ ಮನಗೆಲ್ಲಲು ಪಕ್ಷಗಳ ನಾಯಕರು ಪ್ರಯತ್ನಿಸುತ್ತಾರೆ.

ಇನ್ನೇನು ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಂತೆಯೇ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಅಭಿನಯ ಚಕ್ರವರ್ತಿ ಸುದೀಪ್ ಇಂದು ಬಿಜೆಪಿ ಸೇರುತ್ತಾರೆ ಎನ್ನುವ ಸುದ್ದಿ ಭಾರೀ ಸದ್ದು ಮಾಡುತ್ತಿದೆ.

ಇದಕ್ಕೆ ಪೂರಕವೆಂಬಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭ್ಯರ್ಥಿಗಳ ಆಯ್ಕೆ ಸಭೆ ಮಧ್ಯೆಯೇ ಬೆಂಗಳೂರಿನ ಎರಡು ಖಾಸಗಿ ಹೋಟೆಲ್‌ಗಳಲ್ಲಿ ಪ್ರತ್ಯೇಕ ಸುದ್ದಿಗೋಷ್ಠಿ ಕರೆದಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ಸುದೀಪ್ ಬಿಜೆಪಿಗೆ ಸೇರ್ಪಡೆಯಾದರೆ ಕೇಸರಿ ಪಕ್ಷಕ್ಕೆ ಒಂದಷ್ಟು ಬಲ ಸಿಗಬಹುದು ಎಂದು ವಿಮರ್ಶಿಸಲಾಗುತ್ತಿದೆ. ಅಥವಾ ಈ ಬಾರಿ ಚುನಾವಣೆಯಲ್ಲಿ ಕೇವಲ ಸ್ಟಾರ್ ಪ್ರಚಾರಕರಾಗುತ್ತಾರೆಯೇ ಎಂಬುದು ಮುಖ್ಯವಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News