Saturday, July 27, 2024
Homeಸುದ್ದಿಹಿರಿಯಡ್ಕ: ಅಕ್ರಮವಾಗಿ ತಂಬಾಕು ಸಾಗಾಟ; ವಾಹನ ಸಹಿತ, 27 ಕೆ.ಜಿ ತಂಬಾಕು ವಶಕ್ಕೆ

ಹಿರಿಯಡ್ಕ: ಅಕ್ರಮವಾಗಿ ತಂಬಾಕು ಸಾಗಾಟ; ವಾಹನ ಸಹಿತ, 27 ಕೆ.ಜಿ ತಂಬಾಕು ವಶಕ್ಕೆ

ಹಿರಿಯಡ್ಕ ಎ.4: ಇಲ್ಲಿನ ಅಂಜಾರು ಪೊಲೀಸ್ ಚೆಕ್ ಪೋಸ್ಟ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 20 ಸಾವಿರ ರೂ. ಮೌಲ್ಯದ ತಂಬಾಕನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇಂದು ಮಧ್ಯಾಹ್ನ ಹಿರಿಯಡ್ಕ ಠಾಣಾ ಪೊಲೀಸರು ಅಂಜಾರು ಪೊಲೀಸ್ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹಿರಿಯಡ್ಕ ಕಡೆಯಿಂದ ಉಡುಪಿ ಕಡೆಗೆ ಬಂದ ಮಾರುತಿ ಓಮ್ನಿ ವಾಹನವನ್ನು ತಡೆದು ನಿಲ್ಲಿಸಿ ಪರಿಶೀಲಿಸಿದ್ದರು. ಈ ವೇಳೆ ವಾಹನದಲ್ಲಿ 20 ಸಾವಿರ ರೂ. ಮೌಲ್ಯದ 27 ಕೆ.ಜಿ 520 ಗ್ರಾಂ ತಂಬಾಕು ಕಂಡುಬಂದಿರುತ್ತದೆ.

ಈ ಬಗ್ಗೆ ವಾಹನದ ಚಾಲಕ ಪ್ರಕಾಶ್ ನನ್ನು ವಿಚಾರಿಸಿದಲ್ಲಿ ಆತನು ತಂಬಾಕನ್ನು ಸಾಗಾಟ ಮಾಡಲು ಅಗತ್ಯ ದಾಖಲಾತಿಗಳು ಇರುವುದಿಲ್ಲವಾಗಿ ತಿಳಿಸಿರುತ್ತಾನೆ. ಆದ್ದರಿಂದ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದು, ತಂಬಾಕನ್ನು ಹಾಗೂ ಸಾಗಾಟಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News