Saturday, July 27, 2024
Homeಸುದ್ದಿಕರಾವಳಿಉಡುಪಿ: ಬಾಳೆಬರೆ ಘಾಟ್ ನಲ್ಲಿ ವಾಹನ ಸಂಚಾರ ಎ.15 ವರೆಗೆ ನಿಷೇಧ ವಿಸ್ತರಣೆ

ಉಡುಪಿ: ಬಾಳೆಬರೆ ಘಾಟ್ ನಲ್ಲಿ ವಾಹನ ಸಂಚಾರ ಎ.15 ವರೆಗೆ ನಿಷೇಧ ವಿಸ್ತರಣೆ

ಉಡುಪಿ (ಏ.4): ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ 52 ರ ಬಾಳೆಬರೆ ಘಾಟ್‌ ನಲ್ಲಿ ಕಾಂಕ್ರೀಟ್‌ ಪೇವ್‌ ಮೆಂಟ್‌ ಕಾಮಗಾರಿ ಹಿನ್ನಲೆಯಲ್ಲಿ ಬಾಳೆಬರೆ ಘಾಟ್ ನಲ್ಲಿ ವಾಹನ ಸಂಚಾರಕ್ಕೆ ಇದ್ದ ನಿಷೇಧವನ್ನು 10 ದಿನಗಳ ಕಾಲ ಹೆಚ್ಚವರಿಯಾಗಿ ಮುಂದುವರೆಸಿ ಉಡುಪಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.


ಈ ಮೊದಲು ಎಪ್ರಿಲ್ 05 ರ ವರೆಗೆ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು, ಇದೀಗ ಕಾಮಗಾರಿ ವಿಳಂವಾಗಿರುವ ಕಾರಣ ಈ ವಾಹನ ಸಂಚಾರದ ನಿಷೇಧವನ್ನು ಎಪ್ರಿಲ್ 15 ರವರೆಗೆ ಮುಂದುವರೆಸಲಾಗಿದ್ದು, ವಾಹನ ಸವಾರರು ಬದಲಿ ರಸ್ತೆಯಲ್ಲಿ ಸಂಚಾರ ನಡೆಸಲು ಆದೇಶಿಸಲಾಗಿದೆ.

ತೀರ್ಥಹಳ್ಳಿ ಮೂಲಕ ಕುಂದಾಪುರ ಕಡೆಗೆ ಸಂಚರಿಸುವ ಲಘು ವಾಹನಗಳು ತೀರ್ಥಹಳ್ಳಿ – ಹಾಲಾಡಿ – ಬಸ್ರೂರು – ಕುಂದಾಪುರ, ಭಾರೀ ವಾಹನಗಳು ತೀರ್ಥಹಳ್ಳಿ- ಹೆಬ್ರಿ – ಉಡುಪಿ – ಕುಂದಾಪುರ ಮೂಲಕ ಸಂಚರಿಸಲು ಸೂಚಿಸಲಾಗದಿಎ. ತೀರ್ಥಹಳ್ಳಿ – ಯಡೂರು – ಹುಲಿಕಲ್ – ಕುಂದಾಪುರ ಕಡೆಗೆ ಹೋಗುವ ವಾಹನಗಳು ತೀರ್ಥಹಳ್ಳಿ – ಯಡೂರು – ಮಾಸ್ತಿಕಟ್ಟೆ- ನಗರ – ಕೊಲ್ಲೂರು –ಕುಂದಾಪುರ ಮೂಲ ಸಂಚರಿಸಬೇಕು. ಹೊಸನಗರ – ನಗರ – ಕೊಲ್ಲೂರು – ಕುಂದಾಪುರ ರಸ್ತೆಯಲ್ಲಿ ಭಾರಿ ಸರಕು ವಾಹನಗಳಾದ ಮಲ್ಟಿ ಆಕ್ಸೆಲ್ ಹೊರತುಪಡಿಸಿ ಲಘು ಸರಕು ವಾಹನಗಳು ಮಾತ್ರ ಸಂಚರಿಸಬಹುದಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News