Saturday, June 15, 2024
Homeಸುದ್ದಿಕರಾವಳಿಉಡುಪಿ : ಖಾಸಗಿ ಹೋಟೆಲ್ ನಲ್ಲಿ ಜೂಜಾಟ : 21 ಮಂದಿ ಅರೆಸ್ಟ್..!!

ಉಡುಪಿ : ಖಾಸಗಿ ಹೋಟೆಲ್ ನಲ್ಲಿ ಜೂಜಾಟ : 21 ಮಂದಿ ಅರೆಸ್ಟ್..!!

ಉಡುಪಿ: ಜಿಲ್ಲೆಯ ಖಾಸಗಿ ಹೊಟೇಲ್‌ನಲ್ಲಿ ಜೂಜಾಟವಾಡುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು 21 ಮಂದಿಯನ್ನು ಬಂಧಿಸಿ ನಗದು ಸೇರಿ ಹಲವು ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಹೆರ್ಗಾ ಗ್ರಾಮದ ಪರ್ಕಳ ಸಂಧ್ಯಾ ಹೋಟೆಲ್‌ನಲ್ಲಿ ಜೂಜಾಟವಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ದೊರಕಿತ್ತು.

ಈ ಹಿನ್ನೆಲೆ ಮಣಿಪಾಲ ಪೊಲೀಸ್ ಠಾಣೆಯ ಸಿಬ್ಬಂದಿ ದಾಳಿ ನಡೆಸಿದಾಗ 1,37,800/ ನಗದು, 7 ವಾಹನ, ಮೊಬೈಲ್ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಒಟ್ಟು 21 ಮಂದಿಯನ್ನು ಬಂಧಿಸಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News