ಶಿರ್ವ: ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಸರ ಕಸಿದು ಪರಾರಿ..!!

ಶಿರ್ವ (ಮಾ 26) : ತುಂಡುಬಲ್ಲೆ ಲೆತ್ತಿ ಬಾಯಿ ಮನೆ ಬಳಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಅಪರಿಚಿತ ಯುವಕರಿಬ್ಬರು ಮಹಿಳೆಯ ಸರ ಕಸಿದು ಪರಾರಿಯಾದ ಘಟನೆ ನಡೆದಿದೆ.

ಶಿರ್ವ ಸೊರ್ಪು ನಿವಾಸಿ ಎಮಿಲಿಯನ್ ಸಲ್ದಾನ (64) ಅವರು ಶಿರ್ವ ಚರ್ಚ್‌‌ನಲ್ಲಿ ಪೂಜೆ ಮುಗಿಸಿ ತುಂಡು ಬಲ್ಲೆ ಬಳಿ ಬಸ್ಸಿನಿಂದಿಳಿದು ಮನೆ ಕಡೆ ಒಬ್ಬರೇ ತೆರಳುತ್ತಿದ್ದರು. ಆ ವೇಳೆ ಹೆಲ್ಮೆಟ್ ಧರಿಸಿ ಕಪ್ಪು ಬೈಕ್ ನಲ್ಲಿ ಬಂದ ಯುವಕರಿಬ್ಬರಲ್ಲಿ ಓರ್ವ ಮಹಿಳೆಯ ಬಳಿ ಬಂದು ಚೀಟಿ ತೋರಿಸಿ ವಿಳಾಸ ಕೇಳಿದ್ದಾನೆ. ಮಹಿಳೆ ಇಲ್ಲವೆಂದು ಹೇಳಿ ಮುಂದೆ ಹೋದಾಗ ಹಿಂದಿನಿಂದ ಬಂದು ಆಕೆಯ ಕುತ್ತಿಗೆಯಲ್ಲಿದ್ದ ಸುಮಾರು 12 ಗ್ರಾಮ್ ತೂಕದ ಕ್ರಾಸ್ ಪೇಂಡೆಂಟ್ ಇರುವ ಚಿನ್ನದ ಸರವನ್ನು ಎಳೆದಿದ್ದಾನೆ. ಆಗ ಮಹಿಳೆ ಜೋರಾಗಿ ಬೊಬ್ಬೆ ಹೊಡೆದಿದ್ದು ಸವಾರರಿಬ್ಬರೂ ತುಂಡುಬಲ್ಲೆ ಮುಖ್ಯರಸ್ತೆಯ ಕಡೆಗೆ ಪರಾರಿಯಾಗಿದ್ದಾರೆ.

ಇನ್ನು ಚಿನ್ನದ ಸರದ ಮೌಲ್ಯ ಸುಮಾರು 60,000 ಆಗಿದ್ದು ಮಹಿಳೆ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

You cannot copy content from Baravanige News

Scroll to Top