ಕಾರ್ಕಳ: ವಿಶ್ರಾಂತಿ ಕಟ್ಟಡದ ಎದುರು ನಿಲ್ಲಿಸಿದ್ದ ಬೈಕ್ ಕಳವು

ಕಾರ್ಕಳ ಮಾ.23: ತಾಲೂಕಿನ ಕುಕ್ಕುಂದೂರು ಗ್ರಾಮದಲ್ಲಿ ವಿಶ್ರಾಂತಿ ಕಟ್ಟಡದ ಎದುರು ನಿಲ್ಲಿಸಿದ್ದ ಬೈಕ್ ನ್ನು ಕಳ್ಳರು ಕಳವು ಮಾಡಿರುವ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಎರ್ಲಪಾಡಿ ಗ್ರಾಮದ ಹೆಪ್ಪಳ ಎಂಬಲ್ಲಿನ ನಿವಾಸಿ ವೈಟರ್ ಆಗಿರುವ ಅಕ್ಷಯ್ ಅವರು ಮಾ.18 ರಂದು ಹೊಟೆಲ್‍ನಲ್ಲಿ ರಾತ್ರಿ ಕೆಲಸ ಮುಗಿಸಿ ತಡರಾತ್ರಿ ತಮ್ಮ ವಿಶ್ರಾಂತಿ ಕಟ್ಟಡದ ಎದುರು ಬೈಕನ್ನು ಪಾರ್ಕ್ ಮಾಡಿ ರೂಮಿಗೆ ಹೋಗಿದ್ದರು. ಆದರೆ ಮರುದಿನ ಬೆಳಿಗ್ಗೆ ಬಂದು ನೋಡಿದಾಗ ಬೈಕ್ ನಿಲ್ಲಿಸಿದ ಸ್ಥಳದಲ್ಲಿ ಇಲ್ಲದೇ ಇರುವುದು ಗಮನಕ್ಕೆ ಬಂದಿದೆ. ಅದರಂತೆ ಕಳ್ಳರು ನಿಲ್ಲಿಸಿದ್ದ ಬೈಕ್ ನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂಬುದಾಗಿ ಅಕ್ಷಯ್ ಅವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You cannot copy content from Baravanige News

Scroll to Top