Saturday, July 27, 2024
Homeಸುದ್ದಿಅಕ್ರಮ ಸಂಬಂಧಕ್ಕೆ ನೊಂದು ಪತ್ನಿಗೆ ಚೂರಿ ಇರಿದು ಕೊಂದ ಪತಿ; ಕೋಪದಿಂದ ಮಗುವಿಗೂ ಚಾಕುವಿನಿಂದ ಇರಿತ

ಅಕ್ರಮ ಸಂಬಂಧಕ್ಕೆ ನೊಂದು ಪತ್ನಿಗೆ ಚೂರಿ ಇರಿದು ಕೊಂದ ಪತಿ; ಕೋಪದಿಂದ ಮಗುವಿಗೂ ಚಾಕುವಿನಿಂದ ಇರಿತ

ಬೆಂಗಳೂರು, ಮಾ.21: ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಪತಿಯು ಚಾಕುವಿನಿಂದ ಇರಿದು ಪತ್ನಿಯನ್ನ ಕೊಲೆ ಮಾಡಿದ್ದಲ್ಲದೇ, ಮಗುವಿಗು ಚಾಕು ಚುಚ್ಚಿದ್ದಾನೆ. ಸದ್ಯ ಈ ಘಟನೆ ಹೆಣ್ಣೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತಬ್ಸಂಬಿ ಹತ್ಯೆಯಾದ ಮಹಿಳೆ. ಈಕೆಯ ಗಂಡ ಶೇಕ್ ಸೋಹಿಲ್ ಹತ್ಯೆ ಮಾಡಿದ ಆರೋಪಿ. ಗಾಯಗೊಂಡಿರುವ ಮಗುವನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಬ್ಸಂಬಿ ಮತ್ತು ಶೇಕ್ ಸೋಹಿಲ್ ಇಬ್ಬರು ಕೋಲ್ಕತ್ತಾ ಮೂಲದವರು. 14 ವರ್ಷಗಳ ಹಿಂದೆ ಶೇಕ್ ಸೋಹಿಲ್​ ಜೊತೆ ತಬ್ಸಂಬಿಯಳ ಮದುವೆಯಾಗಿತ್ತು. ಕೆಲಸಕ್ಕೆಂದು ಐದಾರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ನಯೀಮ್ ಎನ್ನುವನ ಜೊತೆ ಪತ್ನಿ ಸಂಪರ್ಕ ಬೆಳೆಸಿಕೊಂಡಿದ್ದಳು. ಹೀಗಾಗಿ ಈ ವಿಷಯ ಗೊತ್ತಾಗಿ ಪತಿಯು ತನ್ನ ಪತ್ನಿಯನ್ನ ಕರೆದುಕೊಂಡು ಕೋಲ್ಕತ್ತಾಗೆ ಮರಳಿದ್ದನು. ಆದರೆ 2 ವರ್ಷದ ಹಿಂದೆ ಪತ್ನಿಯು ಪತಿಯನ್ನ ಬಿಟ್ಟು ನಗರಕ್ಕೆ ಬಂದು ಮತ್ತೆ ನಯೀಮ್ ಜೊತೆ ವಾಸವಿದ್ದಳು. ಹೀಗಾಗಿ ಇಬ್ಬರಿಗು ಒಂದು ಮಗುವಾಗಿತ್ತು.

ಮಗುವಾಗಿದ್ದ ವಿಚಾರ ಗೊತ್ತಾಗಿ ನಿನ್ನೆ ಬೆಂಗಳೂರಿಗೆ ಪತಿ ಶೇಕ್ ಸೋಹಿಲ್ ಬಂದಿದ್ದನು. ಮದ್ಯಪಾನ ಮಾಡಿ ಮಗುವಾಗಿದ್ದ ಬಗ್ಗೆ ಪತ್ನಿಯನ್ನ ಪ್ರಶ್ನಿಸಿ ಜಗಳ ತೆಗೆದಿದ್ದನು. ಈ ವೇಳೆ ಜಗಳ ತಾರಕಕ್ಕೇರಿದ್ದು ಪತ್ನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ನಂತರ ಮಗುವಿಗು ಚಾಕು ಇರಿದಿದ್ದಾನೆ. ಸದ್ಯ ಆರೋಪಿ ಶೇಕ್ ಸೋಹಿಲ್​ನನ್ನು ಹೆಣ್ಣೂರು ಠಾಣಾ ಪೊಲೀಸರು ಬಂದಿಸಿದ್ದಾರೆ

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News