Wednesday, May 29, 2024
Homeಸುದ್ದಿಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ; ಐವರ ಬಂಧನ..!!

ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ; ಐವರ ಬಂಧನ..!!

ಉಡುಪಿ(ಮಾ.18): ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಾನೂನು ಬಾಹಿರವಾಗಿ ಮದ್ಯ ಸೇವನೆ ಮಾಡುತ್ತಿರುವವರ ವಿರುದ್ಧ ದಾಖಲಾಗುತ್ತಿರುವ ಪ್ರಕರಣಗಳು ಹೆಚ್ಚಾಗಿದೆ. ಇದೀಗ ಮತ್ತೆ ಪ್ರಕರಣಕ್ಕೆ ಸಂಬಂಧಿಸಿ ಕಾರ್ಕಳ ಹಾಗೂ ಕೊಲ್ಲೂರಿನಲ್ಲಿ 5 ಮಂದಿಯನ್ನು ವಶಕ್ಕೆ ಪಡೆದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾರ್ಕಳ ನಗರ ಠಾಣೆಯ ಪೊಲೀಸರು ಕಾರ್ಕಳದ ಕಸಬಾ ಗ್ರಾಮದ ಸ್ವರಾಜ್ ಮೈದಾನದ ಬಳಿ ನವನೀತ್ (33), ಪುನೀತ್ ಕುಮಾರ್ (35), ಶರತ್ ಕುಮಾರ್ (27), ಅಜಯ್ (25) ಎಂಬ ನಾಲ್ವರನ್ನು ಹಾಗೂ ಕೊಲ್ಲೂರು ಠಾಣಾ ಪೊಲೀಸರು ಕೊಲ್ಲೂರು ಗ್ರಾಮದ ಸೌರ್ಪಣಿಕ ಸ್ನಾನಘಟ್ಟ ಪರಿಸರದಲ್ಲಿ ಬೆಂಗಳೂರು ಮೂಲದ ನವೀನ್‌ಕುಮಾರ್(28) ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಮತ್ತು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ತಲಾ 1 ರಂತೆ 2 ಪ್ರತ್ಯೇಕ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News