Saturday, June 15, 2024
Homeಸುದ್ದಿಕರಾವಳಿಉಡುಪಿ ರೈಲು ನಿಲ್ದಾಣದಲ್ಲಿ ಕಳವು ಪ್ರಕರಣ : ಇಬ್ಬರು ಕಳ್ಳಿಯರನ್ನು ಬಂಧಿಸಿದ ಪೊಲೀಸರು..!!!

ಉಡುಪಿ ರೈಲು ನಿಲ್ದಾಣದಲ್ಲಿ ಕಳವು ಪ್ರಕರಣ : ಇಬ್ಬರು ಕಳ್ಳಿಯರನ್ನು ಬಂಧಿಸಿದ ಪೊಲೀಸರು..!!!

ಉಡುಪಿ(ಮಾ.16): ಇಲ್ಲಿನ ಇಂದ್ರಾಳಿ ರೈಲು ನಿಲ್ದಾಣದಲ್ಲಿ ನಡೆದ ಚಿನ್ನಾಭರಣ ಕಳ್ಳತನ ಪ್ರಕರಣವನ್ನು 8 ಗಂಟೆಗಳ ಒಳಗೆ ಭೇದಿಸಿರುವ ಪೊಲೀಸರು ಇಬ್ಬರು ಕಳ್ಳಿಯರನ್ನು ಚಿನ್ನಾಭರಣ ಸಹಿತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಾರ್ಚ್ 14 ರಂದು ಮಂಗಳೂರು–ಮುಂಬಯಿ ಎಕ್ಸ್ ಪ್ರೆಸ್ ರೈಲಿನಲ್ಲಿ ಕಾಪುವಿನ ಕುತ್ಯಾರು ಮೂಲದ ಕುಟುಂಬ ಪ್ರಯಾಣಿಸಲು ರೈಲು ಹತ್ತಿದಾಗ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಚಿನ್ನಾಭರಣ ಕಳವಾಗಿತ್ತು. ಈ ಕುರಿತು ಮಣಿಪಾಲ ಪೊಲೀಸ್ ರಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 4 ಲಕ್ಷ ರೂ ಮೌಲ್ಯದ 100 ಗ್ರಾಂ ಚಿನ್ನಾಭರಣ 3 ಸಾವಿರ ಮೌಲ್ಯದ ವಾಚ್ ಬ್ಯಾಗ್ ನಿಂದ ಎಗರಿಸಲಾಗಿತ್ತು.


ಕಾರ್ಯಾಚರಣೆ ನಡೆಸಿದ ಮಣಿಪಾಲ ಠಾಣೆ ಪೊಲೀಸರು ಕೃತ್ಯ ನಡೆಸಿದ 8 ಗಂಟೆಗಳ ಒಳಗೆ ಚಿನ್ನಾಭರಣ ಸಹಿತ ಆರೋಪಿಗಳಾದ ಲಲಿತಾ ಭೋವಿ ( 41) ಮತ್ತು ಸುಶೀಲಮ್ಮ ಭೋವಿ (64) ಎನ್ನುವವರನ್ನು ಬಂಧಿಸಿದ್ದಾರೆ. ಇಬ್ಬರೂ ಭದ್ರಾವತಿಯ ಹನೂಮಂತ ನಗರ ನಿವಾಸಿಗಳಾಗಿದ್ದಾರೆ.

ಇಬ್ಬರು ಈ ಹಿಂದೆಯೂ ಕಳ್ಳತನದ ಚಳಿ ಬೆಳೆಸಿಕೊಂಡಿದ್ದು ಹೊನ್ನಾಳಿ ತಾನೇ ಸೇರಿ ಇತರೆಡೆಯೂ ಪ್ರಕರಣ ದಾಖಲಾಗಿದೆ.

ಕಾರ್ಯಾಚರಣೆಯಲ್ಲಿ ಮಣಿಪಾಲ ಠಾಣೆಯ ಸಿಬಂದಿಗಳಾದ ಪಿಎಸೈ ನವೀನ ನಾಯ್ಕ್, ಎಎಸೈ ಶೈಲೇಶ್, ಹೆಡ್ ಕಾನ್ಸ್ಟೇಬಲ್ ಇಮ್ರಾನ್ , ಶುಭ ಮತ್ತು ಅರುಣಾ ಚಾಳೇಕರ್ ಅವರು ಭಾಗಿಯಾಗಿದ್ದರು. ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News