Thursday, April 25, 2024
Homeಸುದ್ದಿರಾಷ್ಟ್ರೀಯಅತ್ಯಾಕರ್ಷಕ ಹೋಂಡಾ H’ness CB350, CB350RS ಬೈಕ್‌ ಭಾರತದಲ್ಲಿ ಬಿಡುಗಡೆ

ಅತ್ಯಾಕರ್ಷಕ ಹೋಂಡಾ H’ness CB350, CB350RS ಬೈಕ್‌ ಭಾರತದಲ್ಲಿ ಬಿಡುಗಡೆ

ಭಾರತದಲ್ಲಿ ಹೋಂಡಾ ಕಂಪನಿಯು ಅತ್ಯಾಕರ್ಶಕ ವಿನ್ಯಾಸದೊಂದಿಗೆ ಸಿದ್ಧಪಡಿಸಿರುವ H’ness CB350 ಮತ್ತು CB350RS 2023ರ ಮಾದರಿ ಆಕರ್ಷಕ ಬೈಕ್‌ ಗಳನ್ನು ಬಿಡುಗಡೆ ಮಾಡಿದೆ.

ಮಾರ್ಚ್‌ ಅಂತ್ಯದ ವೇಳೆಗೆ ಶೋರೂಮ್‌ಗಳಿಗೆ ವಿತರಣೆಯಾಗಲಿದ್ದು, ಏಪ್ರಿಲ್‌ 1ರಿಂದ ಮಾರುಕಟ್ಟೆಗೆ ಬರಲಿವೆ. ಜೊತೆಗೆ ಹೊಸ ಮಾನದಂಡಗಳಿಗೆ ಅನುಗುಣವಾಗಿರಲಿವೆ.

ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಹೋಂಡಾ ಬೈಕ್‌ 2.09 ಲಕ್ಷ ರೂ. ಬೆಲೆಯಿಂದ ಆರಂಭವಾಗಲಿದೆ. ಹೋಂಡಾ CB350 ಹಾಗೂ CB350RS 6 ವೆರೈಟಿಗಳಲ್ಲಿ ಮಾರುಕಟ್ಟೆಗೆ ಬರುತ್ತಿದೆ. H’ness CB350 (DLx)‌ 2.09 ಲಕ್ಷರೂ, H’ness CB350 (DLX Pro) 2.12 ಲಕ್ಷ ರೂ. H’ness CB350 (DLX Pro Chrome) 2.14 ಲಕ್ಷ ರೂ., CB350RS (DLX) 2.14 ಲಕ್ಷ ರೂ, CB350RS (DLX Pro) ರೂ. 2.17 ಲಕ್ಷ ರೂ. ಹಾಗೂ CB350RS (DLX Pro Dual-Tone) ರೂ. ಬೆಲೆ ಇರಲಿದೆ.

ನೀಲಿ, ಬೂದು ಬಣ್ಣ, ಕಪ್ಪು ಮಿಶ್ರಿತ ಕೆಂಪು ಬಣ್ಣಗಳಿಂದ ಕೂಡಿರುವ ಈ ಬೈಕ್‌ಗಳು, ಬೈಕ್‌ ಪ್ರಿಯರಿಗೆ ನೆಚ್ಚಿನ ಆಯ್ಕೆಯಾಗುವ ವಿಶ್ವಾಸ ಮೂಡಿಸಿವೆ. ಹೆಡ್ ಲ್ಯಾಂಪ್ (ಹೆಡ್‌ಲೈಟ್‌) ವಿನ್ಯಾಸ ನೋಡಲು ಅತ್ಯಾಕರ್ಷವಾಗಿದೆ. ಜೊತೆಗೆ ಸಿಂಗಲ್ ಪೀಸ್‌ ಲೆದರ್ ಸೀಟ್ ಇದ್ದು, ಹಲವು ವೈಶಿಷ್ಟ್ಯತೆಗಳಿಂದ ಕೂಡಿದೆ. ಈ ಎರಡೂ ಹೊಸ ಮಾದರಿಯ ಬೈಕ್‌ಗಳು 350 ಸಿಸಿ ಇಂಜಿನ್‌ಗಳನ್ನ ಹೊಂದಿರುತ್ತವೆ. ಜೊತೆಗೆ 5,500 ಆರ್‌ಪಿಎಂ(ರೆವೊಲ್ಯೂಷನ್ಸ್ ಪರ್ ಮಿನಿಟ್) ಮತ್ತು 3,000 ಆರ್‌ಎಂಪಿ ಸ್ಪೀಟ್‌ ಮಿತಿ ಇರಲಿದ್ದು, 5-ಸ್ಪೀಡ್ ಗೇರ್‌ಬಾಕ್ಸ್ ಹೊಂದಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಅಧ್ಯಕ್ಷ ಅಟ್ಸುಶಿ ಒಗಾಟಾ, ಹೆಚ್‌ಎಂಎಸ್‌ಐ ಸರ್ಕಾರದ ಹೊಸ ಮಾನದಂಡಗಳಿಗೆ ಅನುಗುಣವಾಗಿ ಉತ್ಪನ್ನಗಳನ್ನ ಅಭಿವೃದ್ಧಿಪಡಿಸುವಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಭವಿಷ್ಯದಲ್ಲಿ OBD2B ಕಂಪ್ಲೈಂಟ್ 2023, ಹೆಚ್‌ನೆಸ್‌ CB350 ಮತ್ತು CB350RS ಬೈಕ್‌ಗಳನ್ನು ಪ್ರಾರಂಭಿಸುತ್ತಿದೆ. ಈಗಾಗಲೇ CB350 ಗಳು ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ ಎಂದು ಹೇಳಿದ್ದಾರೆ.

ಹೋಂಡಾ ಸಂಸ್ಥೆ CB350RS ಮತ್ತು ಹೆಚ್‌ನೆಸ್‌ CB350 ಬೈಕ್‌ಗಳಿಗಾಗಿ ಪರಿಕರಗಳ ಪ್ಯಾಕ್‌ಗಳನ್ನು ಬಿಡುಗಡೆ ಮಾಡಿದೆ. ಒಟ್ಟು 6 ಆಕ್ಸೆಸರಿ ಪ್ಯಾಕ್‌ಗಳಿವೆ. ಹೆಚ್‌ನೆಸ್‌ CB350ಗೆ 4 ಮತ್ತು CB350RS ಮೋಟಾರ್‌ಸೈಕಲ್‌ಗೆ 2 ಪ್ಯಾಕ್‌ಗಳಿವೆ. ಇದರಲ್ಲಿ ವಿಶೇಷ ಅಂದ್ರೆ ಬಿಡಿಭಾಗಗಳ ಪ್ಯಾಕ್ ಅನ್ನು ಬಂಡಲ್‌ನಲ್ಲಿಯೂ ಖರೀದಿಸಬಹುದು ಅಥವಾ ಬಿಡಿಭಾಗಗಳಾಗಿಯೇ ಖರೀದಿಸಬಹುದು ಎಂದು ಹೇಳಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News