Wednesday, September 18, 2024
Homeಸುದ್ದಿಕರಾವಳಿಬಂಟ್ವಾಳ: ಕಾರಿನಲ್ಲಿ ಕುಳಿತ ಸ್ಥಿತಿಯಲ್ಲೇ ಶವವಾದ ಚಾಲಕ..!

ಬಂಟ್ವಾಳ: ಕಾರಿನಲ್ಲಿ ಕುಳಿತ ಸ್ಥಿತಿಯಲ್ಲೇ ಶವವಾದ ಚಾಲಕ..!

ಬಂಟ್ವಾಳ: ಯುವಕನೋರ್ವ ಕಾರಿನಲ್ಲಿ ಕುಳಿತು ಮಲಗಿದ ಸ್ಥಿತಿಯಲ್ಲಿ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪದ ಕಲ್ಲಡ್ಕದಲ್ಲಿ ನಡೆದಿದೆ.

ಗೋಳ್ತಮಜಲು ಗ್ರಾಮದ ಹೊಸೈಮಾರ್ ನಿವಾಸಿಯಾಗಿರುವ ಜಗದೀಶ್ ಕಾರಿನಲ್ಲಿ ಕುಳಿತು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿ.



ಮೃತ ಜಗದೀಶ್ ವೃತ್ತಿಯಲ್ಲಿ ಚಾಲಕನಾಗಿದ್ದು, ಕಳೆದ ಕೆಲವು ವರ್ಷಗಳ ಹಿಂದೆ ವಿಡಿಯೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಭಾನುವಾರ ಬೆಳಿಗ್ಗೆ ಬಾವನ ಜೊತೆ ತರವಾಡು ಮನೆಯಲ್ಲಿ ದೈವದ ಕಾರ್ಯಕ್ಕೆ ಮಕ್ಕಳ ಜೊತೆ ಈತ ಹೋಗಿದ್ದ.

ವಾಪಾಸು ಮನೆಗೆ ಬರುವ ವೇಳೆ ಕಲ್ಲಡ್ಕ ತಲುಪಿದ್ದಾಗ ಕಾರು ಚಲಾಯಿಸಲು ಕಷ್ಟವಾಗುತ್ತಿದೆ ಎಂದು ಬಾವನಲ್ಲಿ ಹೇಳಿದ್ದು… ನಾನು ಮತ್ತೆ ಮನೆಗೆ ಬರುತ್ತೇನೆ…. ನೀವು ಮಕ್ಕಳ ಜೊತೆ ಮನೆಗೆ ಹೋಗಿ …. ಎಂದು ಕಳುಹಿಸಿ ಕಾರಿನ ಸೀಟಿನಲ್ಲಿಯೇ ಮಲಗಿದ್ದ ಎನ್ನಲಾಗಿದೆ. ಆದರೆ ರಾತ್ರಿ 7 ಗಂಟೆಯಾದರೂ ಈತ ಮನೆಗೆ ಬಾರದ ಹಿನ್ನೆಲೆಯಲ್ಲಿ ಮತ್ತೆ ಬಂದು ನೋಡಿದಾಗ ಕಾರಿನ ಸೀಟಿನಲ್ಲಿ ಕುಳಿತು ಮಲಗಿದ ಸ್ಥಿತಿಯಲ್ಲಿ ಜಗದೀಶ್ ಕಂಡು ಬಂದಿದ್ದಾರೆ.

ಬಳಿಕ ಕಾರಿನ ಡೋರ್ ಓಪನ್ ಮಾಡಿದಾಗ ಮಲಗಿದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಗಮನಕ್ಕೆ ಬಂದಿದೆ. ಕಾರಿನ ಕಿಟಕಿ , ಬಾಗಿಲನ್ನು ಮುಚ್ಚಿ ಮಲಗಿದ್ದರಿಂದ ಗಾಳಿ ಇಲ್ಲದೆ ಸಾವನ್ನಪಿದ್ದಾರ…? ಅಥವಾ ಸಾವಿಗೆ ಹೃದಯಾಘಾತ ಕಾರಣವಾ ಎಂಬುವುದು ವೈದ್ಯಕೀಯ ರಿಪೋರ್ಟ್ ಹಾಗೂ ಪೊಲೀಸ್ ತನಿಖೆಯ ಬಳಿಕ ತಿಳಿದು ಬರಬೇಕಾಗಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ..

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News