Home ಸುದ್ದಿ ‘ಸಂಕಷ್ಟದಲ್ಲಿದ್ದಾಗ ರಾಜ್ಯಕ್ಕೆ ಬಾರದ ಮೋದಿ ಈಗ ಪದೇ ಪದೇ ಭೇಟಿ ನೀಡುತ್ತಿದ್ದಾರೆ’ – ಡಿಕೆಶಿ ವಾಗ್ದಾಳಿ

‘ಸಂಕಷ್ಟದಲ್ಲಿದ್ದಾಗ ರಾಜ್ಯಕ್ಕೆ ಬಾರದ ಮೋದಿ ಈಗ ಪದೇ ಪದೇ ಭೇಟಿ ನೀಡುತ್ತಿದ್ದಾರೆ’ – ಡಿಕೆಶಿ ವಾಗ್ದಾಳಿ

ರಾಮನಗರ: ಈ ಮೊದಲು ರಾಜ್ಯಕ್ಕೆ ಭೇಟಿ ನೀಡದ ಪ್ರಧಾನಿ ನರೇಂದ್ರ ಮೋದಿಯವರು ಚುನಾವಣೆ ಸಮಯ ಹಾಗಾಗಿ ರಾಜ್ಯಕ್ಕೆ ಪದೇ ಪದೇ ಭೇಟಿ ನೀಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪಿಸಿದ್ದಾರೆ.

ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ಹೆದ್ದಾರಿ ನಿರ್ಮಾಣದ ಕ್ರೆಡಿಟ್ ತೆಗದುಕೊಳ್ಳುವ ಮೊದಲು ಪ್ರಯಾಣಿಕರಿಗೆ ಶೌಚಾಲಯದ ವ್ಯವಸ್ಥೆ ಸೂಕ್ತ ಸರ್ವಿಸ್ ರಸ್ತೆ ನಿರ್ಮಿಸಲಿ ದಶಪಥ ಹೆದ್ದಾರಿಗೆ ಈಗಾಗಲೇ 80 ಜನ ಬಲಿಯಾಗಿದ್ದಾರೆ ಎಂದರು.

ಚುನಾವಣೆ ಸಮಯ ಪ್ರಧಾನಿ ನರೇಂದ್ರ ಮೋದಿ ಪಾಪ ಬರಲಿ, ರಾಜ್ಯದಲ್ಲಿ ನೆರೆ ಹಾವಳಿಗೆ ಬರಲಿಲ್ಲ, ಕೋವಿಡ್ ಸಮಯದಲ್ಲಿ ಜನ ಸತ್ತಾಗ ಬರಲಿಲ್ಲ, ಬರ ಬಂದು ರಾಜ್ಯ ಸಂಕಷ್ಟಕ್ಕೆ ಸಿಲುಕಿದಾಗಲೂ ಬರಲಿಲ್ಲ ,ಕಷ್ಟ ಬಂದಾಗ ಬರಲಿಲ್ಲ, ಹಣ ಕೊಡಲು ಬರಲಿಲ್ಲ‌, ಈಗ ಚುನಾವಣೆ ಬರುವ ಹಿನ್ನಲೆಯಲ್ಲಿ ಪದೇ ಪದೇ ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

Translate »

You cannot copy content from Baravanige News