Wednesday, May 22, 2024
Homeಸುದ್ದಿಹೋಳಿ ಸಂಭ್ರಮಿಸಿದ ದಂಪತಿ ಸ್ನಾನ ಗೃಹದಲ್ಲಿ ಸಾವು

ಹೋಳಿ ಸಂಭ್ರಮಿಸಿದ ದಂಪತಿ ಸ್ನಾನ ಗೃಹದಲ್ಲಿ ಸಾವು

ಮುಂಬೈ: ಹೋಳಿ ಆಟದಲ್ಲಿ ಸಂಭ್ರಮಿಸಿ ಬಣ್ಣ ತೊಳೆಯಲೆಂದು ಬಾತ್‌ರೂಂಗೆ ಹೋಗಿದ್ದ ದಂಪತಿ ಅಲ್ಲೇ ಮೃತಪಟ್ಟ ಘಟನೆ ಮುಂಬೈಯಲ್ಲಿ ನಡೆದಿದೆ. ಗೀಸರ್‌ ಗ್ಯಾಸ್ ಸೋರಿಕೆಯಾಗಿ ಉಸಿರುಗಟ್ಟಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಘಟ್ಕೋಪರ್‌ನಲ್ಲಿರುವ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದ ದೀಪಕ್‌ ಶಾ (42) ಹಾಗೂ ರೀನಾ ಶಾ (39) ಮೃತಪಟ್ಟವರು. ಇಬ್ಬರೂ ಫ್ಲ್ಯಾಟ್‌ನಲ್ಲಿರುವ ತಮ್ಮ ಸ್ನೇಹಿತರೊಂದಿಗೆ ಹೋಳಿ ಆಡಿ ಸಂಭ್ರಮಿಸಿದ್ದಾರೆ. ಬಳಿಕ ಮೈತುಂಬಾ ಮೆತ್ತಿದ್ದ ಬಣ್ಣವನ್ನು ತೊಳೆಯಲೆಂದು ಪತಿ, ಪತ್ನಿ ಇಬ್ಬರೂ ಮನೆಯ ಬಾತ್‌ರೂಂಗೆ ಹೋಗಿದ್ದಾರೆ.

ಇತ್ತ ಸಂಬಂಧಿಕರಿಂದ ದಂಪತಿಗೆ ಹಲವು ಬಾರಿ ಕರೆ ಬಂದರೂ ಸ್ವೀಕರಿಸದ ಕಾರಣ ಅಪಾರ್ಟ್‌ಮೆಂಟ್‌ಗೇ ಬಂದು ಹುಡುಕಾಡಿದಾಗ ಎಲ್ಲೂ ಕಾಣಿಸಲಿಲ್ಲ. ಬಳಿಕ ಫ್ಲ್ಯಾಟ್‌ನ ಪರ್ಯಾಯ ಕೀ ಬಳಸಿ ಬಾತ್‌ರೂಂನ ಬಾಗಿಲು ತೆರೆದಿದ್ದಾರೆ. ಈ ವೇಳೆ ದಂಪತಿ ಪ್ರಜ್ಞಾಹೀನರಾಗಿ ಬಿದ್ದಿರುವುದನ್ನು ನೋಡಿ ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆ ವೇಳೆಗಾಗಲೇ ಅವರು ಮೃತಪಟ್ಟಿರುವುದನ್ನು ವೈದ್ಯರು ಘೋಷಿಸಿದರು.

ಇನ್ನು ಬಾತ್‌ರೂಂನಲ್ಲಿ ಅಳವಡಿಸಿರುವ ಗೀಸರ್‌ನಿಂದ ಗ್ಯಾಸ್ ಸೋರಿಕೆಯಾಗಿ ದಂಪತಿ ಸಾವನ್ನೊಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಪರೀಕ್ಷಾ ವರದಿ ಬಂದ ಬಳಿಕವಷ್ಟೇ ನೈಜ ಕಾರಣ ತಿಳಿಯಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News